ಉಕ್ರೇನ್ ಯುದ್ಧದ ಮಧ್ಯೆ ಮುರಿದು ಬಿತ್ತು ಪುಟಿನ್ ಮಗಳ ಮದುವೆ !

Share the Article

ಉಕ್ರೇನ್‌ನಲ್ಲಿ ರಷ್ಯಾದ ದಾಳಿ ಮುಂದುವರಿದಿದೆ. ಒಂದು ತಿಂಗಳಿನಿಂದ ನಡೆಯುತ್ತಿರುವ ಈ ಯುದ್ಧ ರಷ್ಯಾ ಅಧ್ಯಕ್ಷ ಕ್ಲಾಡಿಮಿರ್ ಪುಟಿನ್ ಕುಟುಂಬದ ಮೇಲೂ ಪರಿಣಾಮ ಬೀರಿದೆ. ಪುಟಿನ್ ಅವರ ಹಿರಿಯ ಪುತ್ರಿ ಡಾ.ಮರಿಯಾ ವೊರೊಂಟೊವಾ (36) ಅವರ ವಿವಾಹ ಮುರಿದುಬಿದ್ದಿದೆ. ಮಾರಿಯಾ ವೊರೊಂಟೊವಾ ತನ್ನ ಡಚ್ ಉದ್ಯಮಿ ಪತಿಯಿಂದ ಬೇರ್ಪಟ್ಟಿದ್ದಾರೆ ಎಂದು ವರದಿಯಾಗಿದೆ. ರಷ್ಯಾ ಅಧ್ಯಕ್ಷ ಪುಟಿನ್ ಕೆಜಿಬಿ ಗೂಢಚಾರರಾಗಿದ್ದಾಗ ಡಾ.ಮಾರಿಯಾ ಜನಿಸಿದ್ದರು.

ಮಾರಿಯಾ ಮಕ್ಕಳಲ್ಲಿ ಅಪರೂಪದ ಆನುವಂಶಿಕ ಕಾಯಿಲೆಗಳಲ್ಲಿ ಪರಿಣಿತ ವೈದ್ಯರಾಗಿದ್ದಾರೆ.

ಪುಟಿನ್ ಅವರ ಹಿರಿಯ ಮಗಳ ಗಂಡನ ಹೆಸರು ಜೋರಿಟ್ ಫಾಸೆನ್. ಇಬ್ಬರಿಗೂ ಮಕ್ಕಳಿದ್ದಾರೆ. ಪತಿ ಮತ್ತು ಹೆಂಡತಿ ಯಾವಾಗ ಬೇರ್ಪಟ್ಟರು ಎಂದು ವರದಿಗಳು ಹೇಳದಿದ್ದರೂ, ಅವರು ಯುದ್ಧದ ಪ್ರಾರಂಭದಲ್ಲಿ ಬೇರ್ಪಟ್ಟಿದ್ದಾರೆ ಎಂದು ವರದಿಯಾಗಿದೆ.

Leave A Reply