28 ವರ್ಷದ ಚಿರಯೌವನದ ಯುವಕನಿಗೆ 67 ರ ವೃದ್ಧೆ ಜೊತೆ ಪ್ರೀತಿ | ‘ಲಿವ್ ಇನ್ ರಿಲೇಷನ್ ಶಿಪ್’ ಗಾಗಿ ಕೋರ್ಟ್ ಮೆಟ್ಟಿಲೇರಿದ ಯುವಕ!

ಈ ಪ್ರೀತಿಗೆ ಕಣ್ಣಿಲ್ಲ ಎಂಬುದನ್ನು ಈ ಜೋಡಿ ರುಜುವಾತು ಮಾಡಿ ತೋರಿಸಿದೆ. ವಯಸ್ಸಿನ ಅಂತರ ಅಜಗಜಾಂತರ ಇದ್ದರೂ, ಇವರಿಬ್ಬರ ಪ್ರೀತಿ ಮಾತ್ರ ನಿರ್ಮಲವಾಗಿದೆ. ಏಕೆಂದರೆ ನಾವು ಇಲ್ಲಿ ಹೇಳಲಿಕ್ಕೆ ಹೊರಟಿರೋ‌ ಲವ್ ಸ್ಟೋರಿ
28 ವರ್ಷದ ಯುವಕ 67 ವರ್ಷದ ಮಹಿಳೆಯ ಜೊತೆ ಪ್ರೀತಿ ಮೊಳಕೆಯೊಡೆದ ಬಗ್ಗೆ.

ಇವರಿಬ್ಬರು ಪ್ರೀತಿಯ ಬಲೆಗೆ ಬಿದ್ದಿದ್ದು, ಇದೀಗ ಲಿವ್ ಇನ್ ರಿಲೇಶನ್ ಶಿಪ್ ಗಾಗಿ ಕೋರ್ಟ್ ಮೆಟ್ಟಿಲೇರಿದ್ದಾನೆ.


Ad Widget

Ad Widget

Ad Widget

Ad Widget

Ad Widget

Ad Widget

ಹೌದು ಮಧ್ಯಪ್ರದೇಶದ ಗ್ವಾಲಿಯರ್‌ನ ಮೊರೆನಾದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

ಕಳೆದ ಹಲವು ವರ್ಷಗಳಿಂದ 67 ವರ್ಷದ ರಾಮ್ ಕಾಲಿ ಮತ್ತು 28 ವರ್ಷದ ಭೋಲು ಪರಸ್ಪರ ಪ್ರೀತಿಸುತ್ತಿದ್ದಾರಂತೆ. ಮದುವೆ ಮಾಡಿಕೊಳ್ಳಲು ಇವರು ಇಷ್ಟಪಟ್ಟಿಲ್ಲ. ಆದರೆ ಒಟ್ಟಿಗೆ ಜೀವನ (ಲಿವ್ ಇನ್ ರಿಲೇಶನ್ ಶಿಪ್) ನಡೆಸಲು ನಿರ್ಧಾರ ಮಾಡಿದ್ದಾರೆ.

ಹೀಗಾಗಿ ಗ್ವಾಲಿಯರ್ ಕೋರ್ಟ್‌ನಿಂದ ನೋಟರಿ ಪಡೆದುಕೊಂಡಿದ್ದಾರೆ. ಇವರು ಜೀವನ ನಡೆಸಲು ಕಾನೂನು ರೀತಿಯಾಗಿ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ವಕೀಲರು ಸಹ ಹೇಳಿದ್ದಾರೆ.

ವಿಚಿತ್ರ ಆದರೂ ಕೆಲವೊಂದು ವಿಷಯ ನಿಜಾನೇ ಆಗಿರುತ್ತದೆ‌ ಎಂಬುದಕ್ಕೆ ಇವರಿಬ್ಬರ ಪ್ರೀತಿ ಸಾಕ್ಷಿ.

error: Content is protected !!
Scroll to Top
%d bloggers like this: