ಈ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸಿಗಲಿದೆ ಉಚಿತ ಪ್ರವೇಶ

ಬೆಂಗಳೂರು: ಬಡತನದ ಕಾರಣದಿಂದ ಶಿಕ್ಷಣದಿಂದ ವಂಚಿತರಾಗೋ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶವಿದ್ದು,ಹೊಸದಾಗಿ ಬೆಂಗಳೂರಿನಲ್ಲಿ ಪ್ರಾರಂಭಿಸಲಾದ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ದೊರೆಯಲಿದೆ.


Ad Widget

Ad Widget

ಬಿಬಿಎಂಪಿ ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು,ಬಿಬಿಎಂಪಿಯ ಉತ್ತರಹಳ್ಳಿ ಪದವಿಪೂರ್ವ ಕಾಲೇಜಿನಲ್ಲಿ ಕಲಾ ವಿಭಾಗದ ಹೆಚ್.ಇ.ಪಿ.ಎಸ್, ವಾಣಿಜ್ಯ ವಿಭಾಗದ ಹೆಚ್.ಇ.ಬಿ.ಎ, ಸಿ.ಇ.ಬಿ.ಎ, ವಿಜ್ಞಾನ ವಿಭಾಗದ ಪಿ.ಸಿ.ಎಂ.ಬಿ ಮತ್ತು ಪಿ.ಸಿ.ಎಂ.ಸಿ ಸಂಯೋಜನೆಗಳುಳ್ಳ ತರಗತಿಗಳಿಗೆ ಉಚಿತ ಪ್ರವೇಶಾತಿ ನೀಡಲಾಗುವುದು ಎಂದು ಹೇಳಿದೆ.


Ad Widget

ಅಲ್ಲದೇ ಪಾಲಿಕೆವತಿಯಿಂದ ಉಚಿತ ಪಠ್ಯ-ಪುಸ್ತಕಗಳು, ಉಚಿತ ಸಮವಸ್ತ್ರ, ಸ್ವೇಟರ್, ಟ್ರಾಕ್ ಪ್ಯಾಂಟ್, ಬ್ಲೇಸರ್, ಟ್ಯಾಬ್ ಮತ್ತು ಲ್ಯಾಪ್‌ಟಾಪ್‌ಗಳು ವಿದ್ಯಾರ್ಥಿಗಳಿಗೆ ದೊರೆಯಲಿದೆ.

error: Content is protected !!
Scroll to Top
%d bloggers like this: