ಬಾಲಕನನ್ನು ಬೆತ್ತಲೆಗೊಳಿಸಿದ ಊರ ಮುಖಂಡ ನಂತರ ಮಾಡಿದ ವಿಕೃತಿ ಏನು ಗೊತ್ತೆ ?‌!

ಹೋಳಿ ಹಬ್ಬದ ಮರುದಿನ ಅಂದರೆ ಮಾರ್ಚ್ 18ರಂದು ಬಸವನಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮದಲ್ಲಿ ಬಾಲಕನನ್ನು ಯುವಕ ಬೆತ್ತಲೆ ಗೊಳಿಸಿ ವಿಕೃತಿ ಮೆರೆದ ಘಟನೆ ನಡೆದಿದೆ.ಯುವಕ ಮಾಡಿದ ಹೀನ ಕೆಲಸಕ್ಕೆ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಅಪ್ರಾಪ್ತ ಬಾಲಕ ಬಣ್ಣ ಆಡುವ ವೇಳೆ ಗೌಡ ಊರ ಮುಖಂಡ ಹಣಮಂತರಾಯ ಮಡಿಕೇಶ್ವರನಿಗೆ ಅಶ್ಲೀಲವಾಗಿ ಬೈದು ಮನೆಗೆ ಓಡಿ ಹೋಗಿದ್ದನಂತೆ. ಬಳಿಕ ಬಾಲಕನ ಮನೆಗೆ ಬಂದ ಹಣಮಂತರಾಯ ಗೌಡ ಅವರ ತಾಯಿ ಮಲಕಮ್ಮನಿಗೆ ನಿನ್ನ ಮಗನಿಗೆ ಬುದ್ದಿ ಹೇಳಿ ಕಳುಹಿಸುತ್ತೇನೆ ಎಂದು ಹೇಳಿ ಕರೆಸಿಕೊಂಡು  ಬಾಲಕನನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಗುಪ್ತಾಂಗಕ್ಕೆ ಬಣ್ಣ ಹಾಕಿ ಕಪ್ಪು ಆಯಿಲ್‌ ಎರಚಿ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾನೆ ಗೌಡ ಊರ ಮುಖಂಡ ಹಣಮಂತರಾಯ.!


Ad Widget

Ad Widget

Ad Widget

ಬೆನ್ನು, ತಲೆ, ಕೈ-ಕಾಲಿಗೆ ಹಲ್ಲೆ ನಡೆದಿದ್ದರಿಂದ‌ ಬಾಲಕ ಅಸ್ವಸ್ಥಗೊಂಡಿದ್ದ ಹೀಗಾಗಿ ಆತನನ್ನ ಮೊದಲಿಗೆ ಬಸವನಬಾಗೇವಾಡಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪ್ರಾಪ್ತ ಬಾಲಕನ ಮೇಲೆ ಹೀಗೆ ವಿಕೃತಿ ಮೆರೆದ ಹಣಮಂತರಾಯನನ್ನ ಬಸವನ ಬಾಗೇವಾಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Reply

error: Content is protected !!
Scroll to Top
%d bloggers like this: