ಪೆರ್ಲಂಪಾಡಿ : ಶ್ರೀ ಕ್ಷೇ.ಧ.ಗ್ರಾಮಾಭಿವೃದ್ದಿ ಯೋಜನೆಯಿಂದ ಹೊಲಿಗೆ ತರಬೇತಿ
ಪುತ್ತೂರು :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಪುತ್ತೂರು ಇದರ ವತಿಯಿಂದ ನಡೆಯುವ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಸೃಜನಶೀಲ ಕಾರ್ಯಕ್ರಮದಡಿಯಲ್ಲಿ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಮಾ.23ರಂದು ಪೆರ್ಲಂಪಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ ಅವರು ನೆರವೇರಿಸಿ ಮಾತನಾಡಿ, ಮಹಿಳೆಯರು ಸ್ವ ಉದ್ಯೋಗ ಮಾಡಿ ಸ್ವಾವಲಂಬಿ ಜೀವನ ನಡೆಸಬೇಕು, ಜೀವನಕ್ಕಾಗಿ ಸ್ವಲ್ಪ ಉದ್ಯೋಗವನ್ನು ಆರಿಸಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಕೊಳ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ಯಾಮ್ ಸುಂದರ್ ರೈ, ಗಜಾನನ ವಿದ್ಯಾಸಂಸ್ಥೆ ಈಶ್ವರಮಂಗಲ ಇದರ ಸಂಚಾಲಕ ಶಿವರಾಮ್ ಭಟ್ ಬಿರ್ನಕಜೆ, ಕೊಳ್ತಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನಾಗವೇಣಿ, ಟೈಲರಿಂಗ್ ತರಬೇತುದಾರೆ ವಿದ್ಯಾ, ಗ್ರಾಮಾಭಿವೃದ್ದಿ ಯೋಜನೆಯ ಕೊಳ್ತಿಗೆ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಉದಯಕುಮಾರ್ ಜಿ.ಕೆ, ಪೆರ್ಲಂಪಾಡಿ ಒಕ್ಕೂಟದ ಅಧ್ಯಕ್ಷ ವಸಂತ ದುಗ್ಗಳ, ಮೊಗಪ್ಪೆ ಒಕ್ಕೂಟದ ಅಧ್ಯಕ್ಷೆ ವೇದಾವತಿ, ಅರಿಯಡ್ಕ ವಲಯದ ಮೇಲ್ವಿಚಾರಕ ಮೋಹನ್, ಜಿಲ್ಲಾ ಸಮನ್ವಯಾಧಿಕಾರಿ ಸುಜಾತ, ಸೇವಾ ಪ್ರತಿನಿಧಿಗಳಾದ ರಮ್ಯಾ , ಶಾರದಾ, ಅರುಣಾ ಅವರು ಉಪಸ್ಥಿತರಿದ್ದರು.
ರಕ್ಷಿತಾ ಪ್ರಾರ್ಥಿಸಿ, ಸುಜಾತ ಸ್ವಾಗತಿಸಿ, ಶಾರದ ಅವರು ವಂದಿಸಿದರು.