ಅಪ್ಪನನ್ನೇ ಹುಡುಗಿಯೆಂದು ಭ್ರಮಿಸಿ ಪ್ರೀತಿ ಮಾಡಿದ ಹುಡುಗನ ಕಥೆ | ಈ ಕಥೆಯೊಳಗಿನ ಒಳ ಗುಟ್ಟೇನು ಗೊತ್ತೇ ?!

ನ್ಯೂಯಾರ್ಕ್: ಇದು ಸ್ವಂತ ಅಪ್ಪನನ್ನು ಮಗ ಉತ್ಕಟವಾಗಿ ಲವ್ ಮಾಡಿದ ಕಥೆ.

ಆ ದಿನ ಸುಂದರ ಹುಡುಗಿಯೊಬ್ಬಳು ಆತನಿಗೆ ಹೈ ಎಂದು ಮೆಸ್ಸೇಜ್ ಮಾಡಿದ್ದಳು. ಹುಡುಗ ಉಲ್ಲಸಿತನಾಗಿದ್ದ. ಬಹುಬೇಗನೆ ಗೆಳೆತನ ಬೆಳೆದುಬಿಟ್ಟಿತ್ತು. ಹುಡುಗಿಯನ್ನು ಹುಡುಗ ಮನಸ್ಸಿಗೆ ತುಂಬಾ ಹಚ್ಚಿಕೊಂಡಿದ್ದ. ಈ ಯುವತಿಯನ್ನು ನೋಡಿ ಮಗ ಮನಸೋತು ಗಾಢವಾಗಿ ಪ್ರೀತಿಸಲು ಶುರು ಮಾಡಿದ. ಹೀಗೆ ಅನೇಕ ತಿಂಗಳು ಇಬ್ಬರ ನಡುವೆ ಪ್ರೀತಿ, ಪ್ರೇಮದ ಸಂಭಾಷಣೆ, ಕೆಲವು ಫೋಟೋಗಳ ಹಂಚಿಕೆ ಎಲ್ಲವೂ ನಡೆಯಿತು. ಆ ಯುವತಿಯನ್ನು ಭೇಟಿ ಮಾಡುವ ಇಚ್ಛೆಯನ್ನು ಮಗ ವ್ಯಕ್ತಪಡಿಸಿದಾಗ ಹುಡುಗಿ ಭೇಟಿಯನ್ನು ಪದೇ ಪದೇ ಮುಂದಕ್ಕೆ ಹಾಕುತ್ತಿದ್ದಳು. ಅದೊಂದು ದಿನ ಹುಡುಗನಿಗೆ ವಿಷಯ ತಿಳಿದು ಹೋಯಿತು. ಇಷ್ಟು ದಿನ ತಾನು ಪ್ರೀತಿ ಮಾಡಿದ್ದು ಬೇರಾರೂ ಅಲ್ಲ, ತನ್ನ ಸ್ವಂತ ಅಪ್ಪನನ್ನು ಎಂದು!


Ad Widget

Ad Widget

Ad Widget

ಸಾಮಾಜಿಕ ಜಾಲತಾಣದಲ್ಲಿ ಮನಸ್ಸಿಗೆ
ಬಂದ ವಿಷಯಗಳನ್ನು ಶೇರ್ ಮಾಡುವುದನ್ನು ಕೆಲವರು ನೋಡಬಾರದು ಎಂದು ಕೆಲವರು ಅಂದುಕೊಳ್ಳುತ್ತಾರೆ. ಅದರಲ್ಲಿ ಕೂಡಾ ತನ್ನ ಅಪ್ಪ-ಅಮ್ಮ ಸೇರಿದಂತೆ ತೀರಾ ಹತ್ತಿರದ ಸಂಬಂಧಿಕರಿಗೆ ತಮ್ಮ ಜಾಲತಾಣದ ಜಾಡು ಸಿಗಬಾರದು ಎಂದುಕೊಂಡು ಆಪ್ತೇಶ್ಟರನ್ನು ಬ್ಲಾಕ್ ಮಾಡುತ್ತಾರೆ. ಹೀಗೆಯೇ ಮಗನೊಬ್ಬ ಅಪ್ಪನನ್ನೇ ಬ್ಲಾಕ್ ಮಾಡಿದ್ದಾನೆ. ಅಂತಹಾ ಮಗನಿಗೆ ಚಾಲಾಕಿ ಅಪ್ಪ ಸಖತ್ ಮಾಂಜಾ ತಿನ್ನಿಸಿದ್ದಾನೆ.

ತನ್ನನ್ನು ಮಗ ಫೇಸ್‌ಬುಕ್ ಖಾತೆಯಿಂದ ಬ್ಲಾಕ್ ಮಾಡಿದ ವಿಷಯ ತಿಳಿದ ಅಪ್ಪ ಮಗನಿಗೆ ಬುದ್ಧಿ ಕಲಿಸಲು ಯುವತಿಯೊಬ್ಬಳ ಹೆಸರಿನಲ್ಲಿ, ಒಂದು ಸುಂದರಿಯ ಫೋಟೋ ಸೃಷ್ಟಿ ಹಾಕಿಕೊಂಡು ಫೇಕ್ ಅಕೌಂಟ್ ಸೃಷ್ಟಿ ಮಾಡಿ ಮಗನ ಜತೆ ಚಾಟ್ ಮಾಡತೊಡಗಿದ. ಈ ಕಥೆಯೇ ಇದು ಇತ್ತೀಚಿಗೆ ಬಿಡುಗಡೆಯಾದ “ಐ ಲವ್ ಮೈ ಡ್ಯಾಡ್” ಎಂಬ ಹಾಲಿವುಡ್ ಚಿತ್ರದ ಕಥೆ. 31 ವರ್ಷದ ಜೇಮ್ಸ್ ಮೊರೋಸಿನ್ ಎಂಬ ನಿರ್ಮಾಪಕ ಈ ಚಿತ್ರವನ್ನು ತೆಗೆದಿದ್ದು, ಇದರಲ್ಲಿ ಬೆಕ್ಕಾ ಎಂಬ ಹುಡುಗಿಯನ್ನು ಹೀರೋ ಲವ್ ಮಾಡುವ ಕಥೆ ಇದೆ. ಆದರೆ ಅಸಲಿಗೆ ಇದು ಈಗ ಸಿನಿಮಾ ಕಥೆ, ಆದರೆ ಸ್ವಯಂ ನಿರ್ದೇಶಕ ಜೇಮ್ಸ್ ಮೊರೋಸಿನ್‌ನ ನೈಜ ಕಥೆ.

ಈ ಕುರಿತು ಜೇಮ್ಸ್ ಮೊರೋಸಿನ್ ಈಗ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಇದು ನನ್ನದೇ ಕಥೆ. ನನ್ನ ಅಪ್ಪನನ್ನು ಸಾಮಾಜಿಕ ಜಾಲತಾಣದಲ್ಲಿ ಬ್ಲಾಕ್ ಮಾ ಬಳಿಕ ಬೆಕ್ಕಾ ಎಂಬ ಯುವತಿಯ ಹೆಸರಿನಲ್ಲಿ ಖಾತೆ ತೆರೆದು ಚಾಟ್ ಮಾಡಲು ಶುರು ಮಾಡಿದ್ದರು. ನಾನು ಯುಟ್ಯೂಬ್ ನಿಜಕ್ಕೂ ಹುಡುಗಿಯೇ ಎಂದುಕೊಂಡು ಲವ್ ಮಾಡಿದ್ದೆ. ಕೊನೆಗೆ ನಿಜ ಗೊತ್ತಾಗಿ ಆಕಾಶವೇ ಕಳಚಿ ಬಿದ್ದಂತಾಯಿತು ಎಂದಿದ್ದಾರೆ.
ಆದ್ದರಿಂದ ಯಾವುದೇ ಹುಡುಗಿಯ ಪ್ರೊಫೈಲ್‌ನಿಂದ ಫ್ರೆಂಡ್ ರಿಕ್ವೆಸ್ಟ್ ಬಂದರೆ… ಹೋಲ್ಡ್ ಆನ್…..ಬುದ್ದಿ ಉಪಯೋಗಿಸಿ, ಸರಿಯಾಗಿ ಪರಿಶೀಲಿಸಿ ಮುಂದುವರೆಯಿರಿ, ಇಲ್ಲದಿದ್ದರೆ ನನ್ನ ಕಿಲಾಡಿ ಅಪ್ಪನಂಥವರೂ ಇರುತ್ತಾರೆ. ಅಪ್ಪನನ್ನೇ ಲವ್ ಮಾಡಬೇಕಾಗುತ್ತದೆ ಎಂದು ಜೇಮ್ಸ್ ಮೊರೋಸಿನ್ ಚಟಾಕಿ ಹಾರಿಸಿದ್ದಾರೆ. ತನ್ನ ಮಗನಿಗೆ ಹೊಸದಾದ ಕಥೆ ಕೊಟ್ಟ ಅಪ್ಪನಿಗೆ ಥಾಂಕ್ಸ್ !!

Leave a Reply

error: Content is protected !!
Scroll to Top
%d bloggers like this: