ಕಾಣಿಯೂರು : ಅಡಿಕೆ, ಆಕ್ಸಿಜನ್ ಸಿಲಿಂಡರ್ ಕಳವು

ಕಡಬ : ಕಾಣಿಯೂರಿನ ಅಡಿಕೆ ಅಂಗಡಿಯೊಂದರಲ್ಲಿ ಅಡಿಕೆ ಕಳ್ಳತನವಾದ ಘಟನೆ ಮಾ 23ರಂದು ರಾತ್ರಿ ನಡೆದಿದೆ.
ಅಂಗಡಿಯ ಶಟರ್ ಒಡೆದು ಈ ಕೃತ್ಯ ನಡೆದಿದ್ದು, ಈ ಬಗ್ಗೆ ಶ್ರೀಗುರು ಟ್ರೇರ‍್ಸ್ ಮಾಲಕ ಪವನ್ ಇವರು ಪೋಲಿಸರಿಗೆ ನೀಡಿರುವ ದೂರಿನಲ್ಲಿ ಸುಮಾರು ೨ಕ್ವಿಂಟಲ್ ಅಡಿಕೆ ಕಳ್ಳತನವಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಪಕ್ಕದ ಪೂರ್ವೋದಯ ಸರ್ವೀಸ್ ಸ್ಟೇಷನ್‌ನಲ್ಲಿದ್ದ ಆಕ್ಸಿಜನ್ ಸಿಲಿಂಡರ್ ಕಳ್ಳತನವಾಗಿದೆ. ಘಟನಾ ಸ್ಥಳಕ್ಕೆ ಬೆಳ್ಳಾರೆ ಪೋಲಿಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

 

ಹಲವು ವರ್ಷಗಳಿಂದ ಕಳ್ಳತನ: ಕಾಣಿಯೂರು ಪೇಟೆಯಲ್ಲಿ ಹಲವು ವರ್ಷದಿಂದ ನಿರಂತರವಾಗಿ ಸರಣಿ ಕಳ್ಳತನ ನಡೆಯುತ್ತಿದೆ. ಅಡಿಕೆ ಅಂಗಡಿ, ಜನರಲ್ ಸ್ಟೋರ್ ಹೀಗೆ ಲಕ್ಷಾಂತರ ರೂಪಾಯಿಯ ಅಡಿಕೆ, ಹಣ ಕಳ್ಳತನ ನಡೆದಿದೆ. ಅಲ್ಲದೇ ಕೆಲದಿನಗಳ ಹಿಂದೆ ಹಾಡಗಲೇ ಡ್ರವರ್‌ನಿಂದ ಹಣ ಕಳ್ಳತನವಾದ ಘಟನೆಯೂ ನಡೆದಿದ್ದರೂ ಒಬ್ಬನೇ ಒಬ್ಬ ಕಳ್ಳ ಈವರೆಗೆ ಪತ್ತೆಯಾಗಲೇ ಇಲ್ಲ.

Leave A Reply

Your email address will not be published.