ಅಂಬೇಡ್ಕರ್ ಜಯಂತಿಯ ಫ್ಲೆಕ್ಸ್‌ಗೆ ಹಾನಿ : ಇಬ್ಬರ ಬಂಧನ

Share the Article

ಮಂಗಳೂರು : ಎಪ್ರಿಲ್ 14ರಂದು ನಡೆಯುವ ಅಂಬೇಡ್ಕರ್ ಜಯಂತಿ ಅಂಗವಾಗಿ ಹಾಕಿದ್ದ ಫ್ಲೆಕ್ಸ್ ‌ಗೆ ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಅಸೈಗೋಳಿ ನಿವಾಸಿ ಶರಣ್ (24) ಹಾಗೂ ಹರೇಕಳ ನಿವಾಸಿ ಸುಜಿತ್ (26) ಎಂದು ಗುರುತಿಸಲಾಗಿದೆ.

ಅಂಬೇಡ್ಕರ್ ಜಯಂತಿ ಪ್ರಯುಕ್ತ ಕೊಣಾಜೆ ಪೊಲೀಸ್ ಠಾಣಾ ವ್ಶಾಪ್ತಿಯ ಅಸೈಗೋಳಿಯಲ್ಲಿ ಅಳವಡಿಸಿದ ಫ್ಲೆಕ್ಸ್ ಹಾನಿಗೊಳಿಸಿದ್ದರು, ಈ ಕುರಿತು ಪ್ರಕರಣ ಕೈಗೆತ್ತಿಕೊಂಡ ಪೊಲೀಸರುಘಟನೆಗೆ ಸಂಬಂಧಿಸಿ ಇಬ್ಬರನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.

ವೈಯುಕ್ತಿಕ ದ್ವೇಷದ ಹಿನ್ನಲೆಯಲ್ಲಿ ಈ ಕೃತ್ಯವೆಸಗಿದ್ದಾಗಿ ಪೋಲೀಸರ ತನಿಖೆಯ ವೇಳೆ ತಿಳಿದುಬಂದಿದೆ.

Leave A Reply