ಟಿಂಬರ್ ಗೋದಾಮಿನಲ್ಲಿ ಅಗ್ನಿ ಅವಘಡ !! | 11 ಮಂದಿ ಕಾರ್ಮಿಕರು ಸಜೀವ ದಹನ

ಟಿಂಬರ್ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿ 11 ಮಂದಿ ಕಾರ್ಮಿಕರು ಸುಟ್ಟು ಕರಕಲಾಗಿರುವ ದುರಂತ ಘಟನೆ ತೆಲಂಗಾಣದ ಸಿಕಂದರಬಾದ್ ನ ಭೋಯಿಗುಡಾ ಪ್ರದೇಶದಲ್ಲಿ ನಡೆದಿದೆ.

ಪೊಲೀಸ್ ಮೂಲಗಳ ಪ್ರಕಾರ ಸಿಕಂದರಬಾದ್‌ನ ಜನನಿಬಿಡ ಭೋಯಿಗುಡಾ ಗೋದಾಮಿನಲ್ಲಿ ಬಿಹಾರದ 12 ವಲಸೆ ಕಾರ್ಮಿಕರು ಸಿಲುಕಿದ್ದರು. ಎರಡು ಅಂತಸ್ತಿನ ಕಟ್ಟಡದಲ್ಲಿ ಮೊದಲನೇ ಮಹಡಿಯಿಂದ ಜಿಗಿಯುವ ಮೂಲಕ ಓರ್ವ ಕಾರ್ಮಿಕ ಬಚಾವ್ ಆಗಿದ್ದು, ಉಳಿದ 11 ಮಂದಿ ಸಜೀವ ದಹನವಾಗಿದ್ದಾರೆ.

ಗೋದಾಮಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದೆ. ಧಗಧಗನೇ ಉರಿಯುತ್ತಿರುವ ಬೆಂಕಿಯ ಜ್ವಾಲೆಯನ್ನು ನಂದಿಸಲು ಸ್ಥಳದಲ್ಲಿ ಅನೇಕ ಅಗ್ನಿಶಾಮಕ ವಾಹನಗಳು ಬೀಡುಬಿಟ್ಟಿದ್ದು, ಬೆಂಕಿಯ ಜ್ವಾಲೆ ತಹಬದಿಗೆ ಬಂದಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿಯಲ್ಲಿ ಮೃತಪಟ್ಟ ಕಾರ್ಮಿಕರ ಕೊನೆಯ ಅವಶೇಷಗಳನ್ನು ಬಿಹಾರಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Leave A Reply

Your email address will not be published.