ಮನೆಯಲ್ಲಿ ಎಂದಿಗೂ ಈ ವಸ್ತುಗಳನ್ನು ಇರಿಸಬೇಡಿ|ಈ ವಸ್ತು ಇದ್ದರೆ ಕುಟುಂಬದ ಸಂತೋಷ ಮತ್ತು ಶಾಂತಿ ಕದಡೋದು ಪಕ್ಕಾ!

0 7

ಪ್ರತಿಯೊಬ್ಬರ ಕನಸು ತಾವೊಂದು ಸುಂದರವಾದ ಮನೆಯನ್ನು ನಿರ್ಮಿಸಬೇಕು ಎಂಬುದು. ಕೆಲವೊಬ್ಬರು ಮನೆ ಕಟ್ಟೋಕು ಮುಂಚೆ ಯಾವ ದಿಕ್ಕಿನಲ್ಲಿ ಯಾವುದು ನಿರ್ಮಿಸಿದರೆ ಒಳಿತು ಎಂದು ಯೋಚಿಸುತ್ತಾರೆ. ಆದ್ರೆ ಕೇವಲ ಮನೆಯ ಪ್ರತಿಯೊಂದು ಕೋಣೆಯನ್ನು ಸರಿಯಾದ ದಿಕ್ಕಿನಲ್ಲಿ ನಿರ್ಮಾಣ ಮಾಡಿದರೆ ಸಾಕಾಗುವುದಿಲ್ಲ.

ಹೌದು.ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಇರಿಸಲಾಗಿರುವ ವಸ್ತುಗಳು ಕೂಡಾ ಧನಾತ್ಮಕ ಅಥವಾ ನಕಾರಾತ್ಮಕ ಶಕ್ತಿಯನ್ನು ಉಂಟುಮಾಡುತ್ತದೆ.ಆದುದರಿಂದ ಮನೆಯಲ್ಲಿ ಇಟ್ಟಿರುವ ವಸ್ತುಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಇಲ್ಲದಿದ್ದರೆ, ಮನೆಯ ಸಂತೋಷ ಮತ್ತು ಶಾಂತಿ ಹಾಳಾಗುತ್ತದೆ.ಅಂತಹ ಕುಟುಂಬದ ನಾಶಕ್ಕೆ ಕಾರಣ ಯಾವ ವಸ್ತುಗಳು ಗೊತ್ತೇ? ಇಲ್ಲಿದೆ ನೋಡಿ..

ಮನೆಯಲ್ಲಿ ಎಂದಿಗೂ ಮುಳ್ಳಿನ ಗಿಡಗಳನ್ನು ಇಡಬೇಡಿ. ಕಳ್ಳಿಯಂತಹ ಮುಳ್ಳು ಗಿಡಗಳು ಮನೆಯಲ್ಲಿ ನಕಾರಾತ್ಮಕತೆಯನ್ನು ತರುತ್ತವೆ. ಕುಟುಂಬ ಸದಸ್ಯರಲ್ಲಿ ವೈಮನಸ್ಸು ಮೂಡುತ್ತದೆ. ಅದೇ ಸಮಯದಲ್ಲಿ, ಬೋನ್ಸಾಯ್ ಸಸ್ಯ ಕೂಡಾ ಬೆಳವಣಿಗೆಯನ್ನು ತಡೆಯುತ್ತದೆ. ಮನೆಯಲ್ಲಿ ಈ ಸಸ್ಯಗಳ ಉಪಸ್ಥಿತಿಯು ಅನೇಕ ವಾಸ್ತು ದೋಷಗಳನ್ನು ಸೃಷ್ಟಿಸುತ್ತದೆ.

ಮನೆಯ ಗೋಡೆಗಳ ಮೇಲೆ ಕಾಡು ಪ್ರಾಣಿಗಳ ಚಿತ್ರಗಳು, ಯುದ್ಧದ ಚಿತ್ರಗಳು, ನಿರ್ಜನ ಭೂದೃಶ್ಯ, ಒಣ ಮರಗಳ ಚಿತ್ರಗಳನ್ನು ಹಾಕಬಾರದು. ಹೀಗೆ ಮಾಡುವುದರಿಂದ ಅನೇಕ ಸಮಸ್ಯೆಗಳು, ಒತ್ತಡಗಳು ಎದುರಾಗುತ್ತವೆ. ಮನೆಯಲ್ಲಿ ಯಾವಾಗಲೂ ವರ್ಣರಂಜಿತ ಮತ್ತು ಮನಸ್ಸಿಗೆ ಮುದ ನೀಡುವ ಚಿತ್ರಗಳನ್ನು ಇರಿಸಿ.

ಮನೆಯಲ್ಲಿ ಜೇಡರ ಬಲೆ ಇರುವುದು ತುಂಬಾ ಅಶುಭ. ಇದರಿಂದ ಮನೆ ಮಂದಿಯಲ್ಲಿ ಸೋಮಾರಿತನ ಮನೆ ಮಾಡುತ್ತದೆ. ಮಾತ್ರವಲ್ಲ ಮನೆಯವರು ಸದಾ ಗೊಂದಲದಲ್ಲಿಯೇ ಇರುತ್ತಾರೆ. ಪ್ರಗತಿ ನಿಂತು ಹೋಗುತ್ತದೆ. ಯಾವುದೇ ವಿಚಾರದ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವಲ್ಲಿ ಎಡವುತ್ತಾರೆ. ಒಟ್ಟಾರೆಯಾಗಿ, ಮನೆಯಲ್ಲಿ ಜೇಡರ ಬಲೆಯನ್ನು ಹೊಂದಿರುವುದು ಪರಸ್ಪರ ಸಂಬಂಧಗಳು ಮತ್ತು ಉದ್ಯೋಗ-ವ್ಯವಹಾರ ಎರಡೂ ವಿಚಾರದಲ್ಲಿ ಒಳ್ಳೆಯದಲ್ಲ.

ಮನೆಯಲ್ಲಿ ನಟರಾಜನ ಮೂರ್ತಿ ಇಡುವುದು ಕೂಡ ಒಳ್ಳೆಯದಲ್ಲ. ಇದು ಶಿವನ ತಾಂಡವದ ಚಿತ್ರವಾಗಿದ್ದು, ಮನೆಯಲ್ಲಿ ಅವರ ಉಪಸ್ಥಿತಿಯು ಸಂಬಂಧಗಳು ಮತ್ತು ಪರಸ್ಪರ ಪ್ರೀತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದುದರಿಂದ ನಟರಾಜನ ಮೂರ್ತಿಯನ್ನು ಮನೆಯಲ್ಲಿ ಇಡಬೇಡಿ.

ಒಡೆದ ಗಾಜು, ಒಡೆದ ಪಾತ್ರೆಗಳು, ಕೆಟ್ಟ ಎಲೆಕ್ಟ್ರಾನಿಕ್ ವಸ್ತುಗಳು, ಹರಿದ ಚಿತ್ರಗಳು, ಪೀಠೋಪಕರಣಗಳು ಮುಂತಾದವುಗಳನ್ನು ಎಂದಿಗೂ ಮನೆಯಲ್ಲಿ ಇಡಬೇಡಿ. ಅವುಗಳು ನಕಾರಾತ್ಮಕ ಶಕ್ತಿಯನ್ನು ಉಂಟು ಮಾಡುತ್ತದೆ. ಮಾತ್ರವಲ್ಲ ಹಣದ ನಷ್ಟವನ್ನು ಕೂಡಾ ಉಂಟುಮಾಡುತ್ತದೆ.

Leave A Reply