ವೈರಲ್ ಆಗುತ್ತಿದೆ ಖ್ಯಾತ ರೊಮ್ಯಾಂಟಿಕ್ ಜೋಡಿಯ ಫೋಟೋ ಕ್ಯಾಪ್ಶನ್ ; ಮುದ್ದಾದ ಮಗು ಆಗಮನ

ತಮ್ಮದೇ ಆಗಿರುವ ನಿರೂಪಣಾ ಶೈಲಿಯ ಮೂಲಕವಾಗಿ ಜನಮನಗೆದ್ದ  ಕಾಮಿಡಿ ಕ್ವೀನ್ ಭಾರತಿ ಸಿಂಗ್ ತಾಯಿಯಾಗುತ್ತಿದ್ದಾರೆ. ಭಾರತಿ ಸಿಂಗ್ ಮತ್ತು ಹರ್ಷ ಲಿಂಬಾಚಿಯಾ ತೆರೆಯ ಮೇಲೆ ಮತ್ತು ತೆರೆಯ ಹಿಂದೆ ಸಕತ್ ರೊಮ್ಯಾಂಟಿಕ್ ಆಗಿರುತ್ತದೆ. ಹಾಗೂ ಈ ಜೊಡಿ  ಜನರನ್ನು ಸಿಕ್ಕಾಪಟ್ಟೆ ನಗಿಸುತ್ತಾರೆ. ಇವರ ಶೋಗಳು ಜನರಿಗೆ ಭರ್ಜರಿ ಮನರಂಜೆ ನೀಡುತ್ತದೆ. ಇದೀಗ ಇವರ ಮನೆಗೆ ಹೊಸ ಅಥಿತಿ ಬರಲಿದ್ದಾರೆ.

 

ಏಪ್ರಿಲ್‍ನಲ್ಲಿ ತಮ್ಮ ಮನೆಗೆ ಮಗುವನ್ನು ಸ್ವಾಗತಿಸಲಿದ್ದಾರೆ ಈ ಜೋಡಿ. ಎಂಟನೇ ತಿಂಗಳನಲ್ಲೂ ಭಾರತಿ ಸಿಂಗ್ ವಾಹಿನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರೆಗ್ನೆನ್ಸಿಯ ದಿನದ ವಿಶೇಷ ಕ್ಷಣವನ್ನು ಕವರ್ ಮಾಡಲು ಭಾರತಿ ಸಿಂಗ್ ಇತ್ತೀಚೆಗೆ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಫೋಟೋಶೂಟ್‍ನಲ್ಲಿ ಪೆಸ್ಟಲ್ ಸ್ಕೈ ರೋಸಿ ಬಣ್ಣದ ರಫಲ್ಡ್ ಡ್ರೆಸ್ ಧರಿಸಿದ್ದಾರೆ.

ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಇರುವ ಭಾರತಿ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಂತಸದಿಂದ ಅಭಿಮಾನಿಗಳು ಶುಭಾಯಶ ಕೋರಿದ್ದಾರೆ ಮತ್ತು ಇವರ ಮಜವಾದ ಕ್ಯಾಪ್ಶನ್ ಗೆ ಮುಗ್ನಳಗೆ ನಕ್ಕಿದ್ದಾರೆ. ಫೋಟೋವನ್ನು ಹಂಚಿಕೊಳ್ಳುವಾಗ ಆನೆ ವಾಲೇ ಬೇಬಿ ಕಿ ಮಮ್ಮಿ ಎಂದು ಭಾರತಿ ಶೀರ್ಷಿಕೆಯಲ್ಲಿ ಹೇಳಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಈಗ ಈ‌ ಜೊಡಿಗೆ ಮುದ್ದಾದ ಹೆಣ್ಣುಮಗು ಆಗಿದ್ದು ಶುಭಾಶಯಗಳ ಸುರಿಮಳೆ ಬರುತ್ತಿದೆ.

Leave A Reply

Your email address will not be published.