ಧಾರ್ಮಿಕ ಕಾರ್ಯಕ್ರಮ ಅಂತಾ ಹೇಳಿ ರಜೆ ಪಡೆದು ದುಬೈ ಪ್ರವಾಸಕ್ಕೆ ಹಾರಿದ ಇನ್ಸ್ ಪೆಕ್ಟರ್ ಸೀದಾ ಮನೆಗೆ : ಕಮಿಷನರ್ ಶಶಿಕುಮಾರ್ ಆದೇಶ

ಧಾರ್ಮಿಕ ಕಾರ್ಯಕ್ರಮ ಇರುವುದಾಗಿ ತಿಳಿಸಿ ರಜೆ ಪಡೆದುಕೊಂಡು, ಅನುಮತಿ ಪಡೆಯದೆ ವಿದೇಶ ಪ್ರವಾಸ ಮಾಡಿದ ಪೊಲೀಸ್ ಇನ್ಸ್‌ಪೆಕ್ಟರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಮಂಗಳೂರು ಪೊಲೀಸ್ ಕಮೀಷನರ್ ಆದೇಶಿಸಿದ್ದಾರೆ.

ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮೊಹಮ್ಮದ್ ಶರೀಫ್ ಅಮಾನತುಗೊಂಡವರು.

ಊರಿನಲ್ಲಿ ಅತೀ ಅಗತ್ಯದ ಧಾರ್ಮಿಕ ಕಾರ್ಯಕ್ರಮ ಇರುವುದಾಗಿ ಅದಕ್ಕಾಗಿ ಮಾರ್ಚ್ 16 ರಿಂದ 20 ವರೆಗೆ ಅಂತ ಹೇಳಿ ರಜೆ ಪಡೆದುಕೊಂಡಿದ್ದರು. ಈ ರೀತಿ ರಜೆ ಪಡೆದುಕೊಂಡು ವಿದೇಶಕ್ಕೆ ಹೋಗಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ಡಿಸಿಪಿ ಹರಿರಾಂ ಶಂಕರ್, ಮೊಹಮ್ಮದ್ ಶರೀಫ್ ರಜೆ ಪಡೆದುಕೊಂಡಿದ್ದರು. ಆದರೆ ವಿದೇಶಕ್ಕೆ ತೆರಳಲು ಅನುಮತಿ ಪಡೆದಿರಲಿಲ್ಲ. ಸೇವಾ ನಿಯಮದ ಪ್ರಕಾರ ಮೇಲಾಧಿಕಾರಿಗಳ ಅನುಮತಿ ಪಡೆದು ವಿದೇಶಕ್ಕೆ ತೆರಳಬೇಕು. ಪ್ರಾಥಮಿಕ ತನಿಖೆ ನಡೆಸಿ ಶರೀಫ್ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.