ಇಂದು ವಿಶ್ವ ಜಲ ದಿನ ; ಜನರು ಪ್ರೀತಿ ಇಲ್ಲದೆ ಬದುಕಬಹುದು. ಕುಡಿಯುವ ನೀರಿಲ್ಲದೆ ಒಬ್ಬನೂ ಜೀವಿಸಲಾರ’
ಪ್ರತಿ ವರ್ಷ ‘ವಿಶ್ವ ಜಲದಿನ’ವನ್ನು ಆಚರಿಸಲಾಗುತ್ತಿದೆ. ಭೂಮಿ ಮೇಲೆ ಸಕಲ ಜೀವರಾಶಿಗಳು ಬದುಕುತ್ತಿರುವುದು ಗಾಳಿ, ಆಹಾರ ಮತ್ತು ನೀರಿನಿಂದ. ಆಹಾರ, ಗಾಳಿ ಒಂದು ಜೀವಿಗೆ ಎಷ್ಟು ಮಖ್ಯವೋ ನೀರು ಕೂಡ ಅಷ್ಟೇ ಮುಖ್ಯವಾಗಿದೆ.
ಶುದ್ಧ ಕುಡಿಯುವ ನೀರಿಗಾಗಿ ಜನ ಪರಿತಪಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ನೀರಿನ ಮಹತ್ವ ಹಾಗೂ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆ ಶ್ರಮಿಸುತ್ತಿದೆ.
1992ರಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿದ ನಿರ್ಣಯದ ಅನುಸಾರ 1993ರಿಂದ ಮೇ 22ರಂದು ಜಲದಿನ ಆಚರಿಸಲಾಗುತ್ತಿದೆ. ಈ ವರ್ಷ ‘ಅದೃಶ್ಯ ಅಂತರ್ಜಲವನ್ನು ಸದೃಶ್ಯಗೊಳಿಸುವುದು’ ಎಂಬ ಥೀಮ್ (ಪರಿಕಲ್ಪನೆ) ಹೊಂದಲಾಗಿದೆ.
ಕಡಿಮೆಯಾಗುತ್ತಿರುವ ಸಿಹಿ ನೀರಿನ ಪ್ರಮಾಣ, ಮಿತಿ ಮೀರಿದ ನೀರಿನ ಬಳಕೆ ಹಾಗೂ ಮುಂದಿನ ಪೀಳಿಗೆಗೆ ಶುದ್ಧ ಕುಡಿಯುವ ನೀರನ್ನು ಉಳಿಸುವ ಬಗ್ಗೆ ಪ್ರಪಂಚದಾದ್ಯಂತ ಅರಿವು ಮೂಡಿಸುವಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಶುದ್ಧನೀರು ಪ್ರತಿಯೊಬ್ಬರ ಹಕ್ಕು ಮತ್ತು ಅಗತ್ಯ. ಇದು ಪ್ರತಿಯೊಬ್ಬರೂ ಉಚಿತವಾಗಿ ಪಡೆಯಲೇಬೇಕಾದ ಸಂಪನ್ಮೂಲವಾದರೂ ದುಬಾರಿಯಾದ ಸರಕುಗಳ ಪಟ್ಟಿಗೆ ಸೇರ್ಪಡೆಯಾಗುತ್ತಿದೆ. ನೀರು ಮರುಬಳಕೆ ಮಾಡಬಹುದಾದ೦ತಹ ಸಂಪನ್ಮೂಲ. ಆದರೆ ಇದರ ಮರುಬಳಕೆ ಪ್ರತಿಯೊಬ್ಬ ಮನುಷ್ಯ ವಿಶೇಷವಾಗಿ, ಸ್ಥಿತಿವಂತರ ಇಚ್ಛಾಶಕ್ತಿಯ ಮೇಲೆ ನಿಂತಿದೆ.