ಎರಡು ತಿಂಗಳ ಹೆಣ್ಣು ಮಗು ಮೈಕ್ರೋವೇವ್ ಓವನ್‍ನಲ್ಲಿ ಶವವಾಗಿ ಪತ್ತೆ !! | ತನ್ನ ಕರುಳಕುಡಿಯನ್ನು ತಾನೇ ಕೊಂದಳೇ ಹೆತ್ತಮ್ಮ !!?

ಎರಡು ತಿಂಗಳ ಹೆಣ್ಣು ಮಗುವೊಂದು ಮನೆಯ ಮೈಕ್ರೋವೇವ್ ಓವನ್‍ನಲ್ಲಿ ಶವವಾಗಿ ಪತ್ತೆಯಾದ ಘಟನೆ ದಕ್ಷಿಣ ದೆಹಲಿಯ ಚಿರಾಗ್ ಡಿಲ್ಲಿ ಪ್ರದೇಶದಲ್ಲಿ ನಡೆದಿದೆ.

ಗುಲ್ಶನ್ ಕೌಶಿಕ್ ಮತ್ತು ಡಿಂಪಲ್ ಕೌಶಿಕ್ ಮಗುವಿನ ಪೋಷಕರು. ಇವರಿಗೆ 4 ವರ್ಷದ ಗಂಡು ಮಗನಿದ್ದಾನೆ. ಜನವರಿಯಲ್ಲಿ ಎರಡನೇ ಮಗುವಾಗಿ ಹೆಣ್ಣು ಮಗು ಜನಿಸಿತ್ತು. ಆದರೆ ಡಿಂಪಲ್ ಕೌಶಿಕ್‍ಗೆ ಹೆಣ್ಣುಮಗುವಿನ ಬಗ್ಗೆ ಅಸಮಾಧಾನವಿತ್ತು. ಪ್ರತಿನಿತ್ಯ ಪತಿಯ ಜೊತೆ ಜಗಳವಾಡುತ್ತಿದ್ದರು.


Ad Widget

Ad Widget

Ad Widget

ಆದರೆ ನಿನ್ನೆ ಯಿಕೋ ಡಿಂಪಲ್ ಕೌಶಿಕ್ ಮನೆ ಬೀಗ ಹಾಕಿಕೊಂಡಿದ್ದರು. ಎಷ್ಟೇ ಕೇಳಿಕೊಂಡರೂ ಮನೆಯ ಬೀಗ ತೆಗೆಯುತ್ತಿರಲಿಲ್ಲ. ಇದರಿಂದಾಗಿ ಆಕೆಯ ಅತ್ತೆ, ಬಾಗಿಲನ್ನು ತೆಗಿಯದಿದ್ದರೇ ನಾವು ಗಾಜು ಒಡೆದು ಮನೆಯನ್ನು ಪ್ರವೇಶಿಸುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಆದರೂ ತೆಗೆಯಿದ್ದಾಗ ಅವರೇ ಗಾಜನ್ನು ಒಡೆದು ಮನೆ ಪ್ರವೇಶಿಸಿದ್ದಾರೆ. ಅಲ್ಲಿ ಡಿಂಪಲ್ ಕೌಶಿಕ್ ಹಾಗೂ ಅವಳ ಮಗ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಆದರೆ ಎರಡು ತಿಂಗಳ ಮಗು ಕಾಣೆಯಾಗಿತ್ತು.

ಇದರಿಂದಾಗಿ ನೆರೆಹೊರೆಯವರ ಸಹಾಯದಿಂದ ಮಗುವನ್ನು ಮನೆಯಲ್ಲಿ ಹುಡುಕಿದಾಗ 2ನೇ ಮಹಡಿಯಲ್ಲಿದ್ದ ಮೈಕ್ರೋವೇವ್‍ನಲ್ಲಿ ಪತ್ತೆಯಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಮಗುವಿನ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಾಯಿಯೇ ಮಗುವನ್ನು ಕೊಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಘಟನೆ ಸಮಯದಲ್ಲಿ ಮಗುವಿನ ತಂದೆ ಹತ್ತಿರದ ಅಂಗಡಿಗೆ ತೆರಳಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: