ಮೊಸರಿನೊಂದಿಗೆ ಸೇವಿಸಲೇ ಬಾರದ ಪದಾರ್ಥದ ಮಾಹಿತಿ ಇಲ್ಲಿದೆ ನೋಡಿ..
ನಮ್ಮ ಆರೋಗ್ಯ ನಮ್ಮ ಕೈಯಲ್ಲಿ. ಅದನ್ನು ಯಾವರೀತಿಲಿ ನಿರ್ವಹಿಸಬೇಕೆಂಬುದನ್ನು ನಾವೇ ತಿಳಿದುಕೊಳ್ಳ ಬೇಕಿದೆ. ನಾವೆಲ್ಲರೂ ಆಹಾರ ರುಚಿಸಬೇಕೆಂದು ಸೇವಿಸುತ್ತೇವೆಯೇ ಹೊರತು ಆರೋಗ್ಯ ದೃಷ್ಟಿಯಿಂದ ಅಲ್ಲ. ಇಲ್ಲೇ ನೋಡಿ ನಾವು ಮಾಡುತ್ತಿರೋ ತಪ್ಪು. ಯಾಕಂದ್ರೆ ಯಾವ ಆಹಾರ ಯಾವುದರೊಂದಿಗೆ ಸೇರಬಾರದು ಎಂಬುದು ಇಲ್ಲಿ ಮುಖ್ಯಾಂಶ.
ಉದಾಹರಣೆಗೆ ಮೊಸರು. ಸಾಮಾನ್ಯವಾಗಿ ಪ್ರತಿಯೊಬ್ಬರೂ ಎಲ್ಲಾ ಸಮಾರಂಭಗಳಿಗೆ ಅಥವಾ ಮಾಮೂಲ್ ಊಟಕ್ಕೂ ಮೊಸರನ್ನು ಬಳಸುತ್ತಾರೆ. ಆದ್ರೆ ಹೆಚ್ಚಿನ ಜನ ಖಾಲಿ ಮೊಸರು ಸೇವಿಸದೆ ರುಚಿಗೆಂದು ಇತರ ಪದಾರ್ಥ ಸೇರಿಸುತ್ತಾರೆ.ಹೀಗೆ ಮಾಡುವುದರಿಂದ ಆಹಾರದ ರುಚಿ ಹೆಚ್ಚುತ್ತದೆಯೇ ಹೊರತು ಅದು ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸಬಹುದು. ಕೆಲವು ಪದಾರ್ಥಗಳನ್ನು ಮೊಸರಿನೊಂದಿಗೆ ಸೇವಿಸಲೇ ಬಾರದು. ಅವುಗಳ ಪಟ್ಟಿ ಇಲ್ಲಿದೆ ನೋಡಿ.
ಮೊಸರಿನೊಂದಿಗೆ ಈರುಳ್ಳಿ ತಿನ್ನುವುದು ಹಾನಿಕಾರಕ :
ಮೊಸರಿಗೆ ಈರುಳ್ಳಿಯನ್ನು ಸೇರಿಸಿದರೆ ತಿನ್ನಲು ಬಹಳ ರುಚಿಯಾಗಿರುತ್ತದೆ. ಆದರೆ ಅದು ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ಮೊಸರು ಮತ್ತು ಈರುಳ್ಳಿ ಎರಡರ ಪ್ರವೃತಿ ವಿಭಿನ್ನವಾಗಿರುತ್ತದೆ. ಈರುಳ್ಳಿ ಬಿಸಿ ಪ್ರವೃತಿಯದ್ದಾಗಿದ್ದರೆ, ಮೊಸರು ತಂಪು. ಹೀಗಾಗಿ ಇವೆರಡನ್ನು ಒಟ್ಟಿಗೆ ತಿನ್ನುವುದರಿಂದ ತುರಿಕೆ, ಎಸ್ಜಿಮಾ, ಸೋರಿಯಾಸಿಸ್, ಚರ್ಮ ಮತ್ತು ಹೊಟ್ಟೆಗೆ ಸಂಬಂಧಿಸಿದ ಅನೇಕ ರೋಗಗಳು ಕಾಣಿಸಿಕೊಳ್ಳಬಹುದು.
ಮಾವು :
ಮಾವು ಮತ್ತು ಮೊಸರನ್ನು ಯಾವುದೇ ಕಾರಣಕ್ಕೂ ತಿನ್ನಬಾರದು. ಮೊಸರು ಮತ್ತು ಮಾವು ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ದೇಹಕ್ಕೆ ವಿಷವಾಗಿ ಪರಿಣಮಿಸಬಹುದು.
ಉದ್ದಿನಬೇಳೆ ಮತ್ತು ಮೊಸರು :
ಉದ್ದಿನಬೇಳೆ ಮತ್ತು ಮೊಸರನ್ನು ಜೊತೆಯಲ್ಲಿ ಸೇವಿಸುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇವೆರಡನ್ನು ಒಟ್ಟಿಗೆ ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತದೆ.
ಹಾಲು ಮತ್ತು ಮೊಸರು :
ಹಾಲು ಮತ್ತು ಮೊಸರು ಎರಡನ್ನೂ ಒಟ್ಟಿಗೆ ಸೇವಿಸಬಾರದು. ಹೀಗೆ ಮಾಡುವುದರಿಂದ ಅಸಿಡಿಟಿ, ಗ್ಯಾಸ್, ವಾಂತಿ ಸಮಸ್ಯೆ ಶುರುವಾಗುತ್ತದೆ. ಅಲ್ಲದೆ, ಜೀರ್ಣಕ್ರಿಯೆಯ ಸಮಸ್ಯೆ ಕೂಡಾ ಕಾಡುತ್ತದೆ.