ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು, ಮೂವರು ಸ್ಥಳದಲ್ಲೇ ಸಾವು

Share the Article

ಭೀಕರ ಕಾರು ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಇನ್ನೊಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದ ಬಳಿ ನಡೆದಿದೆ.

ದರ್ಶನ ರಮೇಶ ರಾಜಪುರೋಹಿತ (19), ಶೌಕತ್ ಆ ಪಠಾಣ (22), ಮೆಹಪೂಜ್ (25) ಸಾವಿಗೀಡಾಗಿದ್ದು, ಅಪ್ಪಾನಾ ಮುಲ್ಲಾ (20) ಗಾಯಗೊಂಡವರು.

ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದ ಸಾವಿಗೀಡಾದರೆ, ಇನ್ನೊಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ. ಅಷ್ಟೇ ಅಲ್ಲ, ಅಪಘಾತದ ತೀವ್ರತೆಗೆ ಕಾರಿಗೆ ಬೆಂಕಿ ಹೊತ್ತಿ ಉರಿದಿದೆ.

ಅಪಘಾತ ಸಂಭವಿಸಿದ್ದನ್ನು ನೋಡಿ ಲಾರಿ ಚಾಲಕರೊಬ್ಬರು ತಕ್ಷಣ ಕಾರಿನಿಂದ ಮೂವರ ಶವ ಹೊರಕ್ಕೆ ತೆಗೆದಿದ್ದಾರೆ. ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Leave A Reply