ಸಿನಿಮಾಗಳಂತಹ ದೊಡ್ಡ ಫೈಲ್ ನ್ನು ಒಂದು ಫೋನ್ ನಿಂದ ಇನ್ನೊಂದು ಫೋನ್ ಗೆ ಟ್ರಾನ್ಸ್ ಫರ್ ಮಾಡಲು ಈ ಆ್ಯಪ್ ಬೆಸ್ಟ್ ! ಒಂದೇ ಸೆಕೆಂಡ್ ನಲ್ಲಿ ಶೇರ್ ಮಾಡಬಹುದು

ಸಿನಿಮಾಗಳಂತಹ ದೊಡ್ಡ ಫೈಲ್‌ಗಳನ್ನು ಒಂದು ಸ್ಮಾರ್ಟ್‌ಫೋನ್‌ನಿಂದ ಇನ್ನೊಂದು ಸ್ಮಾರ್ಟ್‌ಫೋನ್‌ಗೆ ವರ್ಗಾಯಿಸಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಆದರೆ ಅತೀ ಸುಲಭ ಸಮಯದಲ್ಲಿ ಆದಷ್ಟು ಬೇಗನೇ ಇಲ್ಲಿ ಹೇಳಲಾಗುವ ಟ್ರಿಕ್ ಮೂಲಕ ಸುಲಭವಾಗಿ ಕಳುಹಿಸಬಹುದಾಗಿದೆ. ಹಾಗೂ ಸಮಯದ ಉಳಿತಾಯ ಕೂಡಾ ಮಾಡಬಹುದು.

ನಿಮ್ಮ‌ ಬಳಿ ಐಫೋನ್ ಇದ್ದರೆ, ನೀವು ಏರ್‌ಡ್ರಾಪ್ ಸಹಾಯದಿಂದ ದೊಡ್ಡ ಫೈಲ್‌ಗಳನ್ನು ವರ್ಗಾಯಿಸಬಹುದು. ಆದರೆ ಈ ಸಮಸ್ಯೆ ಕಾಡುವುದು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ. ನೀವು ಅಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಾಗಿದ್ದರೆ, ಫೋಟೋಗಳು, ವೀಡಿಯೊಗಳು ಮತ್ತು ಇತರ ಫೈಲ್‌ಗಳನ್ನು ಕಳುಹಿಸಲು ಬಳಕೆದಾರರಿಗೆ ‘ Nearby Share’ ಎಂಬ ಸೇವೆಯನ್ನು ಗೂಗಲ್ ಪರಿಚಯಿಸಿದೆ. ಇದರ ಮೂಲಕವೂ ಆ್ಯಪ್‌ಗಳನ್ನು ಹಂಚಿಕೊಳ್ಳಬಹುದು.

ಆ್ಯಪಲ್ ಫೋನ್ ನ ಏರ್‌ಡ್ರಾಪ್‌ನಂತೆಯೇ ಇದು ಕಾರ್ಯನಿರ್ವಹಿಸುತ್ತದೆ. ‘Nearby Share’ ಸೇವೆಯು ಬಳಕೆದಾರರಿಗೆ ಇಬ್ಬರು ಬಳಕೆದಾರರ ಸಾಧನಗಳ ನಡುವೆ ಪೀರ್-ಟು-ಪೀರ್ ವೈಫೈ ನೆಟ್‌ವರ್ಕ್ ಮೂಲಕ ಬ್ಲೂಟೂತ್ ಸಂಪರ್ಕದಿಂದ ಆಗುತ್ತದೆ. ಇದರರ್ಥ ಈ ಸೇವೆಯನ್ನು ಬಳಸಲು ಬಳಕೆದಾರರಿಗೆ ಮೊಬೈಲ್ ಡೇಟಾ ಅಥವಾ ವೈ ಫೈ ಅಗತ್ಯವಿಲ್ಲ ಎಂದು. ಫೈಲ್ ಕಳುಹಿಸುವವರು ಮತ್ತು ಸ್ವೀಕರಿಸುವವರು ತಮ್ಮ ಫೋನ್‌ನ ವೈಫೈ ಮತ್ತು ಬ್ಲೂಟೂತ್ ಅನ್ನು ಆನ್ ಮಾಡಿರಬೇಕು.

ನಂತರ ಗೂಗಲ್ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ‘ಫೈಲ್ಸ್’ ಅಪ್ಲಿಕೇಶನ್ ತೆರೆಯಿರಿ, ಕೆಳಗಿನ ಬಲಭಾಗದಲ್ಲಿ ಶೇರ್ ಐಕಾನ್ ಕಾಣಿಸಿಕೊಳ್ಳುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ನಿಮ್ಮ ಆಯ್ಕೆಯ ಪ್ರಕಾರ ‘ಕಳುಹಿಸು’ ಅಥವಾ ‘ಸ್ವೀಕರಿಸಿ’ ಆಯ್ಕೆಯನ್ನು ಆರಿಸಿ. ಈ ರೀತಿಯಾಗಿ, ನೀವು ದೊಡ್ಡ ಅಥವಾ ಚಿಕ್ಕದಾದ ಎಲ್ಲಾ ರೀತಿಯ ಫೈಲ್‌ಗಳನ್ನು ಸುಲಭವಾಗಿ ವರ್ಗಾಯಿಸಲು ಸಾಧ್ಯವಾಗುತ್ತದೆ.

Leave A Reply

Your email address will not be published.