ಕಲಾವಿದೆ ಮೇಲೆ ಆಸಿಡ್ ದಾಳಿ !

Share the Article

ಕಲಾವಿದೆಯೊಬ್ಬರ ಮೇಲೆ ಆಸಿಡ್ ದಾಳಿ ನಡೆಸಿರುವ ಘಟನೆ ನಂದಿನಿ ಲೇಔಟ್​ನ ಗಣೇಶ ಬ್ಲಾಕ್​ನಲ್ಲಿ ನಡೆದಿದೆ. ರಂಗಭೂಮಿ ಕಲಾವಿದೆ ದೇವಿ ಎಂಬುವವರ ಮೇಲೆ‌ ಮಾರ್ಚ್​ 18ರಂದು ಆಯಸಿಡ್ ದಾಳಿ ನಡೆದಿದಿದ್ದು ತಡವಾಗಿ ಬೆಳಕಿಗೆ ಬಂದಿದೆ.

 ಬಿಎಂಟಿಸಿಯಲ್ಲಿ ಕೆಲಸ ನಿರ್ವಹಿಸಿದ್ದ ದೇವಿ,ಅನಾರೋಗ್ಯ ಹಿನ್ನೆಲೆಯಲ್ಲಿ ಬಿಎಂಟಿಸಿ ನಿರ್ವಾಹಕ ಹುದ್ದೆ ತೊರೆದಿದ್ದರು. ರಂಗಭೂಮಿ ಕೆಲಸದಲ್ಲಿ ತೊಡಗಿಕೊಂಡೊದ್ದರು.ಮನೆಯ ಜಗಲಿಯ ಮೇಲೆ‌ ಮಲಗಿದ್ದಾಗ ಆಯಸಿಡ್ ಎರಚಲಾಗಿದೆ. ರಂಗಭೂಮಿ ಕಲಾವಿದರೇ ಆದ ರಮೇಶ್, ಸ್ವಾತಿ, ಆಸಿಡ್ ಎರಚಿದ್ದಾರೆ.

ಸ್ವಾತಿ ಎಂಬಾಕೆ ಆರೋಪಿ ರಮೇಶ್​ಗೆ ಆಸಿಡ್ ತಂದು ಕೊಟ್ಟು ಕೃತ್ಯ ಮಾಡಲು ಪ್ರಚೋದನೆ ನೀಡಿದ್ದಾರೆ. ಕೃತ್ಯಕ್ಕೆ ಕಾರಣ ಇನ್ನು ತಿಳಿದು ಬಂದಿಲ್ಲ. ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಮೇಶ್, ಸ್ವಾತಿ, ಯೋಗೇಶ್ ಅವರನ್ನು ಬಂಧಿಸಲಾಗಿದೆ‌

Leave A Reply