ಹೋಗಿ ಹೋಗಿ ಭಿಕ್ಷುಕನೊಂದಿಗೆ ಅಕ್ರಮ ಸಂಬಂಧ ಶುರು ಹಚ್ಕೊಂಡ ಗೃಹಿಣಿ | ದೇವರಿಂದ ಮೆಸ್ಸೇಜ್ ಬಂತು ಎಂದು ಭಿಕ್ಷುಕನ ಜತೆ ಸೆಕ್ಸ್ ಮಾಡಿದ್ಲು ಪತ್ನಿ !!!

0 12

ಶ್ರೀಮಂತರೊಂದಿಗೆ ಅಕ್ರಮ ಸಂಬಂಧ ಹೊಂದುವುದನ್ನು ನೋಡಿದ್ದೇವೆ. ಆದ್ರೆ ಇಲ್ಲಿನ ಕತೆ ವಿಚಿತ್ರ ಮತ್ತು ಅಪರೂಪ. ಇಲ್ಲಿ ಸಮೃದ್ಧ ಜೀವನ ನಡುತ್ತಿರುವ ಮಹಿಳೆಯೊಬ್ಬಳು ಭಿಕ್ಷುಕನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡು, ಕಾರಿನಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದ ವೇಳೆಯೇ ಪತಿ ಕೈಗೆ ಬಟ್ಟೆ ಜಾರಿದ ಸ್ಥಿತಿಯಲ್ಲಿ ಸಿಕ್ಕು ಬಿದ್ದಿದ್ದಾಳೆ.
ಪತ್ನಿಯ ಈ ಅವಸ್ಥೆ ಮತ್ತು ವ್ಯವಸ್ಥೆ ನೋಡಿ ಜಿಮ್ ಟ್ರೈನರ್ ಪತಿ ಆಘಾತಕ್ಕೆ ಒಳಗಾದ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ.

ಜಿಮ್ ಟ್ರೈನರ್ ಎಡ್ವರ್ಡೊ ಅಲೈಸ್ ಎಂಬಾತ ಪಾರ್ಕ್ ಮಾಡಿದ್ದ ಕಾರಿನ ಕಡೆಗೆ ಹೋಗಿ ಅದರ ವಿಂಡ್‌ಶೀಲ್ಡ್ ಇಣುಕಿ ನೋಡಿದಾಗ ಅಲ್ಲಿ ಕಂಡದ್ದು ತನ್ನ ಪ್ರೀತಿಯ ಪತ್ನಿಯನ್ನು, ಜತೆಗೆ ಇನ್ನೊಬ್ಬನನ್ನು. ಆದರೆ ಅಷ್ಟರಲ್ಲಾಗಲೇ, ಬೇರೊಬ್ಬ ವ್ಯಕ್ತಿಯ ಜತೆ ಪತ್ನಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ಕಂಡ ಆತ ದಂಗಾಗಿದ್ದಾನೆ. ನಂತರ ಕೋಪಗೊಂಡ ವಿಂಡ್‌ಶೀಲ್ ಫೇಸುಕ್ ಒಡೆದು ಹಾಕಲು ಯತ್ನಿಸಿದ್ದಾನೆ. ಬಳಿಕ ಅಲೈಸ್, ಕಾ ಬಾಗಿಲು ತೆರೆದು ಒಳಗೆ ನುಗ್ಗುವ ಮೊದಲು ಹೊರಗಡೆಯಿಂದಲೇ ಪತ್ನಿ ಜತೆ ಇದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಬಳಿಕ ನಿರ್ಗತಿಕ ಕೈಯಲ್ಲಿ ಬಟ್ಟೆಗಳನ್ನು ಹಿಡಿದುಕೊಂಡು ಬೆತ್ತಲೆಯಾಗೇ ಕಾರಿನಿಂದ ಇಳಿದು ಪರಾರಿಯಾಗಲು ಯತ್ನಿಸಿದಾಗ ಆತನನ್ನು ಹಿಡಿದು ಅಲೈಸ್ ಥಳಿಸುತ್ತಾನೆ. ಬಳಿಕ ಕಾರಿನಿಂದ ಇಳಿಯುವ ಆಕೆಯ ಪತ್ನಿಯನ್ನು ಅಲೈಸ್ ತರಾಟೆಗೆ ತೆಗೆದುಕೊಳ್ಳುತ್ತಾನೆ. ಇದಿಷ್ಟು ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ದಾಖಲಾಗಿದೆ.

ಈ ಘಟನೆ ಮಾರ್ಚ್ 10ರಂದು ಮುಂಜಾನೆ ಬ್ರೆಜಿಲ್‌ನ ಫೆಡರಲ್ ಜಿಲ್ಲೆಯ ಜರ್ದಿಮ್ ರೊರಿಝ್ನಲ್ಲಿ ನಡೆದಿದೆ. ಜಿಮ್ ಟ್ರೈನರ್ ಅಲ್ವೇಸ್ ಪತ್ನಿ ಸದಾ ಚರ್ಚಿಗೆ ಹೋಗುವವಳಾಗಿದ್ದು, ದೇವರ ಮೇಲೆ ತುಂಬಾ ಭಕ್ತಿ ಇದ್ದವಳು. ಬಡವರಿಗೆ, ಇಲ್ಲದವರಿಗೆ ಏನಾದ್ರೂ ಕೊಡಬೇಕು, ದಾನ ಮಾಡಬೇಕು ಎಂಬ ಮನಸ್ತಿತಿಯವಳು. ತಾನು ಮಾಡಿದನ್ನು ಸಮರ್ಥಿಸಿಕೊಂಡಿರುವ ಆಕೆ, ನಿರಾಶ್ರಿತರಿಗೆ ಸಹಾಯ ಮಾಡುವಂತೆ ದೇವರಿಂದ ಸಂದೇಶ ಸ್ವೀಕರಿಸಿದೆ. ಹೀಗಾಗಿ ಸಾಂತ್ವನ ಮತ್ತು ಲೈಂಗಿಕ ಸುಖ ವಿಹೀನ ವ್ಯಕ್ತಿಗೆ ಸುಖ ನೀಡಲು ನಿರ್ಧರಿಸಿದೆ ಎಂದು ತನ್ನ ಈ ಕೆಲಸವನ್ನೂ ಆಕೆ ಸಮರ್ಥಿಸಿಕೊಂಡಿದ್ದಾಳೆ.

ಅದಕ್ಕಾಗೇ ಕಾರಿನಲ್ಲೇ ನಿರಾಶ್ರಿತನೊಂದಿಗೆ ಅಲೈಸ್ ಪತ್ನಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಳು. ಆ ಸಮಯದಲ್ಲಿ ಅವಳು ಭಿಕ್ಷುಕನೊಂದಿಗೆ ಹೊಂದಿದ್ದ ಸಂಬಂಧ ಪರಸ್ಪರ ಒಪ್ಪಿಗೆ ನಡೆದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾನು ಪ್ರತಿ ನಿತ್ಯ ಹಾಜರಾಗುತ್ತಿದ್ದ ಚರ್ಚ್ ಮೂಲಕ ದುರ್ಬಲ ಜನರಿಗೆ ಸಹಾಯ ಮಾಡುವುದನ್ನು ಆನಂದಿಸುತ್ತಿದ್ದಳು. ಎಂದು ಆಕೆಯೇ ಪೊಲೀಸರಿಗೆ ಹೇಳಿದ್ದಾಳೆ. ನಾನು ದೇವರಿಂದ ಸಂದೇಶ ಪಡೆದ ಬಳಿಕ ಈ ರೀತಿ ಮಾಡಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ.
ಆ ಭಿಕ್ಷುಕ ವ್ಯಕ್ತಿಗೆ ಅಲೈಸ್ ಹಿಗ್ಗಾಮುಗ್ಗ ಥಳಿಸಿದ್ದು,  ಗಾಯಗೊಂಡಿರುವ ನಿರಾಶ್ರಿತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಫೆಡರಲ್ ಜಿಲ್ಲೆಯ ಸಿವಿಲ್ ಪೊಲೀಸ್ ತನಿಖೆಯನ್ನು ಮುಂದುವರಿಸಿದ್ದಾರೆ.

Leave A Reply