ರೂಪವಿಲ್ಲದ ಅಪರೂಪದ ಜೀವಿ ಪತ್ತೆ| ಜನರಲ್ಲಿ ಹೆಚ್ಚಿದ ಕುತೂಹಲ!
ಪ್ರಕೃತಿ ಒಂದು ಅಚ್ಚರಿ, ಅದ್ಭುತ, ವಿಸ್ಮಯ. ಅದೆಷ್ಟೋ ಅಪರೂಪದ ಪ್ರಾಣಿಗಳು, ಜೀವಿಗಳು ಇಲ್ಲಿ ಅಡಗಿವೆ. ಅಪರೂಪದ ಜೀವಿಯೊಖದು ಕಾಣಿಸಿಕೊಂಡು ಜನರಿಗೆ ಆಶ್ಚರ್ಯ ಮೂಡಿಸಿದೆ. ತಿಳಿಯಿರಿ ಈ ಜೀವಿಯ ಬಗ್ಗೆ ಕುತೂಹಲಕಾರಿ ಮಾಹಿತಿ
ಥೈಲ್ಯಾಂಡ್ ಜೌಗು ಪ್ರದೇಶದಲ್ಲಿ ನಿಗೂಢ ‘ಫ್ಯೂರಿ ಗ್ರೀನ್ ಹಾವು ಪತ್ತೆಯಾಗಿದೆ. ಫ್ಯೂರಿ ಗ್ರೀನ್’ ಹಾವು ಥಾಯ್ಲೆಂಡ್‌ನಲ್ಲಿ ಒಬ್ಬ ವ್ಯಕ್ತಿ ತನ್ನ ಮನೆಯ ಸಮೀಪದಲ್ಲಿ ಕಂಡಿದ್ದಾರೆ. ರೋಮದಿಂದ ಕೂಡಿದ ಈ ಹಸಿರು ಹಾವು ಈಶಾನ್ಯ ಥೈಲ್ಯಾಂಡ್‌ನ ಸಖೋನ್ ನಖೋನ್ ಪ್ರಾಂತ್ಯದಲ್ಲಿ ಕಂಡು ಬಂದಿದೆ. ಸುಮಾರು ಎರಡು ಅಡಿ ಉದ್ದವಿದೆ ಈ ಹಾವು.
ಈ ಜೀವಿಯ ಮೈಮೇಲಿನ ಪದರಗಳು ಕೆರಾಟಿನ್ನಿಂದ ಮಾಡಲ್ಪಟ್ಟಿದೆ ಎಂದು ವನ್ಯಜೀವಿಯ ತಜ್ಞರೊಬ್ಬರು ಹೇಳಿದ್ದಾರೆ. ವೈಲ್ಡ್‌ಲೈಫ್ ಎಆರ್‌ಸಿಯಲ್ಲಿ ಹಾವಿನ ಜಾತಿಯ ಸಂಯೋಜಕರಾಗಿರುವ ಸ್ಯಾಮ್ ಚಾಟ್‌ಫೀಲ್ಡ್, ಈ ಹಾವನ್ನು ಪಪ್ ಮುಖದ ನೀರಿನ ಹಾವು ಎಂದು ಗುರುತಿಸಿದ್ದಾರೆ. ಪಫ್ ಮುಖದ ನೀರಿನ ಹಾವುಗಳು ಸಾಮಾನ್ಯವಾಗಿ ಗಾಢ ಕಂದು ಬಣ್ಣದಿಂದ ಕಪ್ಪು ಬಣ್ಣದಲ್ಲಿರುತ್ತವೆ.
ಈ ಜಾತಿಗಳು ಥೈಲ್ಯಾಂಡ್, ಭಾರತ, ಬಾಂಗ್ಲಾದೇಶ, ಮ್ಯಾನ್ಮಾರ್, ಕಾಂಬೋಡಿಯಾ, ಸಿಂಗಾಪುರ್ ಮತ್ತು ಮಲೇಷ್ಯಾದಲ್ಲಿ ಕಂಡುಬರುತ್ತವೆ ಮತ್ತು ಕೊಳಗಳು, ಜೌಗು ಪ್ರದೇಶಗಳು ಮತ್ತು ಕಾಡಿನ ತೊರೆಗಳಂತಹ ಸಿಹಿನೀರಿನ ಪ್ರದೇಶದಲ್ಲಿ ವಾಸಿಸುತ್ತವೆ. ಈ ಹಾವು ಸಣ್ಣ ಮೀನು ಅಥವಾ ಕಪ್ಪೆಗಳನ್ನು ತಿನ್ನುತ್ತವೆ. ಪಫ್ ಮುಖದ ನೀರಿನ ಹಾವುಗಳು ಸ್ವಲ್ಪ ವಿಷಕಾರಿ ಮತ್ತು ಪ್ರಾಥಮಿಕವಾಗಿ ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತವೆ ಎನ್ನಲಾಗಿದೆ.