34 ವರ್ಷದ ಭಾರತೀಯನ ಜೀವ ಉಳಿಸಿದ ಆ್ಯಪಲ್ ವಾಚ್ !! | ಕೈಗಡಿಯಾರ ಆತನನ್ನು ಕಾಪಾಡಿದ್ದು ಹೇಗೆ ಗೊತ್ತಾ ??

0 10

ಆ್ಯಪಲ್ ವಾಚ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಜನಪ್ರಿಯ ಸ್ಮಾರ್ಟ್ ವಾಚ್ ಆಗಿದ್ದು, ಬಲು ದುಬಾರಿ ಎಂದೇ ಹೇಳಬಹುದು. ಬೆಲೆ ಜೊತೆಗೆ ಅದರ ಕೆಲವು ವೈಶಿಷ್ಟ್ಯಗಳು ಗ್ರಾಹಕರ ಮನಗೆದ್ದಿದೆ. ಅಂದಹಾಗೆ ಆ್ಯಪಲ್ ವಾಚ್ ಜೀವ ಉಳಿಸುವ ಸಾಧನವಾಗಿ ಬದಲಾಗುವ ಹಲವಾರು ಕಥೆಗಳನ್ನು ನೀವು ಕೇಳಿರಬಹುದು. ಅದರಂತೆ ಇದೀಗ ಮತ್ತೊಮ್ಮೆ ಅಂತಹದೇ ಘಟನೆ ನಡೆದಿದ್ದು, ಈ ಬಾರಿ ಆ್ಯಪಲ್ ವಾಚ್ 34 ವರ್ಷದ ಭಾರತೀಯ ಬಳಕೆದಾರನ ಜೀವ ಉಳಿಸಿದೆ.

ಹರಿಯಾಣದ ಯಮುನಾ ನಗರದ ನಿವಾಸಿ 34 ವರ್ಷದ ನಿತೀಶ್ ಚೋಪ್ರಾ ಅವರು ಅಸೌಖ್ಯದಿಂದ ಬಳಲುತ್ತಿದ್ದು, ಅವರಿಗೆ ಕಡಿಮೆ ನಿಶ್ಶಕ್ತಿ ಹಾಗೂ ಎದೆನೋವು ಹೊಂದಿದ್ದರು. ಹೀಗಾಗಿ ಪತ್ನಿ ನೇಹಾ ಅವರ ಆರೋಗ್ಯದ ಸರಿಯಾದ ಮಾಹಿತಿ ತಿಳಿದುಕೊಳ್ಳಲು ನಿತೀಶ್​ಗೆ ಕಳೆದ ವರ್ಷ ಉಡುಗೊರೆಯಾಗಿ ಆ್ಯಪಲ್ ವಾಚ್ 6 ನೀಡಿದ್ದರು. ಅದರಂತೆ ನಿತೀಶ್​​ ಆ ವಾಚ್​ ಅನ್ನು ಧರಿಸಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ನಿತೀಶ್​ ಅವರ ಆರೋಗ್ಯದ ಮಾಹಿತಿಯನ್ನು ​ಆ್ಯಪಲ್ ವಾಚ್​ ನೀಡುತ್ತಿತ್ತು. ಇತ್ತೀಚೆಗೆ ಇಸಿಜಿ ಮಾಹಿತಿಯನ್ನು ಆ್ಯಪಲ್ ವಾಚ್​ ನೀಡಿದೆ ಮತ್ತು ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿರುವುದನ್ನು ಹೇಳಿದೆ. ಹಾಗಾಗಿ ಅವರು ತಕ್ಷಣ ಹತ್ತಿರದ ಆಸ್ಪತ್ರೆಗೆ ತೆರಳಿದ್ದು, ಆಸ್ಪತ್ರೆಯಲ್ಲಿ ಆಂಜಿಯೋಗ್ರಫಿ ಮಾಡಿದ ನಂತರ, ನಿತೇಶ್ ಅವರ ಅಪಧಮನಿಗಳಲ್ಲಿ 99.9 ಪ್ರತಿಶತದಷ್ಟು ತೊಂದರೆ ಕಾಣಿಸಿದೆ ಎಂದು ತಿಳಿದುಬಂತು.

ಇದೀಗ ಆರೋಗ್ಯವಾಗಿರುವ ನಿತೇಶ್ ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆ್ಯಪಲ್ ವಾಚ್‌ನ ಈ ರೀತಿಯ ಗಂಭೀರ ವಿಷಯದ ಬಗ್ಗೆ ಎಚ್ಚರಿಸುವ ಸಾಮರ್ಥ್ಯದಿಂದ ಪ್ರೇರೇಪಿಸಲ್ಪಟ್ಟ ನೇಹಾ ಆಪಲ್ ಸಿಇಒ ಟಿಮ್ ಕುಕ್‌ಗೆ ಇಮೇಲ್ ಬರೆದು ಆ್ಯಪಲ್ ವಾಚ್ ತನ್ನ ಗಂಡನ ಜೀವವನ್ನು ಹೇಗೆ ಉಳಿಸಿತು ಎಂದು ಧನ್ಯವಾದ ತಿಳಿಸಿದ್ದಾರೆ.

ಆ್ಯಪಲ್ ವಾಚ್ 6 ಬೆಲೆ 40,900 ರೂ. ಮತ್ತು ಆ್ಯಪಲ್ ವಾಚ್ ಸೀರೀಸ್ 6 (GPS + ಸೆಲ್ಯುಲಾರ್) ರೂ 49,900 ರಿಂದ ಪ್ರಾರಂಭವಾಗುತ್ತದೆ. ಕೈಗಡಿಯಾರಗಳನ್ನು ಎರಡು ವಿಭಿನ್ನ ಗಾತ್ರಗಳಲ್ಲಿ ನೀಡಲಾಗುತ್ತದೆ. ಆಪಲ್ ವಾಚ್ 6 ಹಲವಾರು ಪ್ರಮುಖ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ವಾಚ್ ಸರಣಿ 6 ರಲ್ಲಿ ಇರುವ ಆಕ್ಸಿಮೀಟರ್ ಸಂವೇದಕವು ಬಳಕೆದಾರರ ರಕ್ತದ ಆಮ್ಲಜನಕದ ಮಟ್ಟವನ್ನು ಅಳೆಯಬಹುದು. ಒಳಭಾಗದಲ್ಲಿ, ಆ್ಯಪಲ್ ವಾಚ್ ಸೀರೀಸ್ 6 ಅನ್ನು S6 ಪ್ರೊಸೆಸರ್‌ನಿಂದ ನಡೆಸಲಾಗುತ್ತದೆ. ಇದು ಸರಿಸಾಟಿಯಿಲ್ಲದ ಕಾರ್ಯಕ್ಷಮತೆಗಾಗಿ A13 ಬಯೋನಿಕ್ ಪ್ರೊಸೆಸರ್‌ನ ಆಪ್ಟಿಮೈಸ್ಡ್ ಆವೃತ್ತಿಯಾಗಿದೆ. ಸ್ಮಾರ್ಟ್ ವಾಚ್ 40 ಎಂಎಂ ಮತ್ತು 44 ಎಂಎಂ ಸೇರಿದಂತೆ ಎರಡು ಗಾತ್ರಗಳಲ್ಲಿ ಬರುತ್ತದೆ. ಇದು IP68 ಪ್ರಮಾಣೀಕೃತವಾಗಿದೆ, ಅಂದರೆ ನೀರು ಮತ್ತು ಧೂಳಿನ ವಿರುದ್ಧ ರಕ್ಷಿಸುತ್ತದೆ.

Leave A Reply