ಡ್ಯಾನ್ಸ್ ತರಗತಿಗೆ ಬಂದ ಹಿಂದೂ ಅಪ್ರಾಪ್ತೆ ಮೇಲೆ ಲೈಂಗಿಕ ಶೋಷಣೆ ಮಾಡಿದ ಅನ್ಯಕೋಮಿನ ಯುವಕ |

Share the Article

ಅನ್ಯಕೋಮಿನ ಯುವಕನೊಬ್ಬ ಹಿಂದೂ ಧರ್ಮದ ಅಪ್ರಾಪ್ತೆಗೆ ಕೊಲೆ ಬೆದರಿಕೆ ಹಾಕಿದ ಘಟನೆಯೊಂದು ಶನಿವಾರಸಂತೆ ಎಂಬಲ್ಲಿ ನಡೆದಿದೆ.

ನನ್ನನ್ನು ಪ್ರೀತಿಸಬೇಕು, ಇಲ್ಲದಿದ್ದರೆ ಕೊಲೆ ಮಾಡುತ್ತೇನೆ ಎಂದು ಧಮ್ಕಿ ಹಾಕಿದ ಅನ್ಯಕೋಮಿನ ಯುವಕನನ್ನು ಶನಿವಾರಸಂತೆ ಪೊಲೀಸರು ಬಂಧಿಸಿದ್ದಾರೆ.

ಸಲ್ಮಾನ್ ಎಂಬಾತನೇ ಬಂಧಿತ ಆರೋಪಿ.

ಈತ ಶನಿವಾರಸಂತೆಯಲ್ಲಿ ಡಾನ್ಸ್ ತರಗತಿ ನಡೆಸುತ್ತಿದ್ದು, ಎರಡು ವರ್ಷಗಳ ಹಿಂದೆ ಬಾಲಕಿ ಡಾನ್ಸ್ ತರಗತಿಗೆ ಹೋಗುತ್ತಿದ್ದಳು. ನಂತರ ತರಗತಿಗೆ ಹೋಗುವುದನ್ನು ನಿಲ್ಲಿಸಿದ್ದಳು. ಈ ನಡುವೆ, ಅಪ್ರಾಪ್ತ ಹುಡುಗಿಗೆ ಕರೆ ಮಾಡಿದ ಸಲ್ಮಾನ್, “ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ತಕ್ಷಣ ಡಾನ್ಸ್ ತರಗತಿಗೆ ಬಾ” ಎಂದು ಬಲವಂತವಾಗಿ ಬರಮಾಡಿಸಿದ್ದಾನೆ. ಅನಂತರ ಅಲ್ಲಿಗೆ ಬಂದ ಅಪ್ರಾಪ್ತೆಗೆ ಪ್ರೀತಿಸುವಂತೆ ಬಲವಂತ ಮಾಡಿದ್ದಲ್ಲದೇ, ಜೀವಬೆದರಿಕೆ ಹಾಕಿದ್ದಾನೆ.

ಇದನ್ನು ತಿಳಿದ ಹಿಂದುಪರ ಸಂಘಟನೆ ಕಾರ್ಯಕರ್ತರು ಡಾನ್ಸ್ ತರಗತಿಗೆ ತೆರಳಿ ಅಲ್ಲೇ ಇದ್ದ ಯುವಕ ಮತ್ತು ಅಪ್ರಾಪ್ತೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಾಲಕಿಯ ಪೋಷಕರು ಈ ಸಂಬಂಧ ದೂರು ನೀಡಿದ್ದು, ದೂರಿನಲ್ಲಿ ‘
ಡಾನ್ಸ್ ಕಲಿಸುವುದಾಗಿ ಸಲ್ಮಾನ್ ತಮ್ಮ ಪುತ್ರಿಯನ್ನು ತರಗತಿಗೆ ಕರೆಸಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗಿದೆ.

ಈ ಪ್ರಕರಣದ ಸಂಬಂಧ ಶನಿವಾರಸಂತೆ ಪೊಲೀಸರು ಪೋಕೋ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Leave A Reply