ಈ ಊರಿನ ಜಾತ್ರೆಯಲ್ಲಿದೆ ಒಂದು ವಿಲಕ್ಷಣ ಸಂಪ್ರದಾಯ !!| 20 ಕ್ಕೂ ಹೆಚ್ಚು ಕುರಿಗಳ ಕತ್ತು ಕಚ್ಚಿ ರಕ್ತ ಕುಡಿಯುತ್ತಾರಂತೆ ಇಲ್ಲಿನ ಅರ್ಚಕ- ವೀಡಿಯೋ ವೈರಲ್

ಒಂದೊಂದು ಊರಿನ ಜಾತ್ರೆಗಳಲ್ಲಿ ಒಂದೊಂದು ರೀತಿಯ ಸಂಪ್ರದಾಯವಿರುತ್ತದೆ. ಆದರೆ ಕೆಲವು ಜಾತ್ರೆಗಳಲ್ಲಿ ಪ್ರಾಣಿಹಿಂಸೆ ಮಾಡುತ್ತಿರುವ ಘಟನೆಗಳು ಇತ್ತೀಚೆಗೆ ಬೆಳಕಿಗೆ ಬರುತ್ತಿದ್ದು, ಅಂತೆಯೇ ಜಾತ್ರೆಯಲ್ಲಿ ಕುರಿಗಳ ರಕ್ತವನ್ನು ಕುಡಿದು ದೇವರನ್ನು ಸಂಪ್ರೀತಗೊಳಿಸಿದ ವಿಲಕ್ಷಣ ಘಟನೆ ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.


Ad Widget

ಪ್ರತಿ ಪಾಲ್ಗುಣ ಮಾಸದಲ್ಲಿ ನಡೆಯುವ ಗ್ರಾಮದ ದೊಡ್ಡಮ್ಮತಾಯಿ ಜಾತ್ರೆಯಲ್ಲಿ ಕುರಿಗಳ ರಕ್ತ ಹೀರುವ ಸಂಪ್ರದಾಯ ನಡೆದಿದೆ. ಅರ್ಚಕ ಕುರಿ ರಕ್ತ ಹೀರುವ ವೀಡಿಯೋ ವೈರಲ್ ಆಗಿದ್ದು, 20 ಕ್ಕೂ ಹೆಚ್ಚು ಕುರಿಗಳ ಬಲಿ ಕೊಟ್ಟಿದ್ದು ಅದರ ರಕ್ತವನ್ನು ಅರ್ಚಕರು ಕುಡಿದಿದ್ದಾರೆ ಎಂದು ಭಕ್ತಾದಿಯೊಬ್ಬರು ತಿಳಿಸಿದ್ದಾರೆ.

https://youtube.com/shorts/vBGGxj7psOo?feature=share


Ad Widget

ದೊಡ್ಡಮ್ಮತಾಯಿ ರಥದಲ್ಲಿ ನಿಂತಿರುವ ಅರ್ಚಕನಿಗೆ ಅಲ್ಲೇ ಬಲಿಕೊಟ್ಟ ಕುರಿಯನ್ನು ನೀಡಿದಾಗ ಹಲ್ಲಿನಿಂದ ಕಚ್ಚಿ ರಕ್ತ ಹೀರಿದರೆ ದೇವರನ್ನು ಸಂತೃಪ್ತಿಗೊಳಿಸಿದ ಹಾಗೆ ಎಂಬುದು ಭಕ್ತಾಧಿಗಳ ನಂಬಿಕೆಯಾಗಿದೆ. ಹರಕೆ ಹೊತ್ತ ಭಕ್ತರು ಜಾತ್ರೆ ವೇಳೆ ಪ್ರಾಣಿಗಳ ಬಲಿ ಕೊಡುವಾಗ ಅರ್ಚಕ ಪ್ರತಿ ಪ್ರಾಣಿಯನ್ನು ತನ್ನ ಹಲ್ಲಿನಿಂದ ರಕ್ತ ಹೀರಿ ಕುಡಿಯುವುದು ತಲೆತಲಾಂತಗಳಿಂದ ನಡೆದುಕೊಂಡು ಬಂದಿದೆ.


Ad Widget

ಇನ್ನು ಈ ಹಬ್ಬದಲ್ಲಿ ಸಂಬಂಧಿಕರನ್ನು ಕರೆಸಿ ಬಲಿಕೊಟ್ಟ ಕುರಿಯಿಂದ ಖಾದ್ಯ ತಯಾರಿಸಿ ಉಣ ಬಡಿಸುತ್ತೇವೆ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ. ಒಟ್ಟಿನಲ್ಲಿ ವಿಲಕ್ಷಣ ಸಂಪ್ರದಾಯವೊಂದು ತಲೆತಲಾಂತರಗಳಿಂದ ನಡೆದುಕೊಂಡು ಬರುತ್ತಿರುವುದು ಅಚ್ಚರಿಯೇ ಎಂದೆನ್ನಬಹುದು.

error: Content is protected !!
Scroll to Top
%d bloggers like this: