ಮದುವೆಯಾಗದ ಬೇಸರ | ಮನೆಗೆ ಬಣ್ಣ ಬಳಿಯೋ ನೆಪ ಮಾಡಿಕೊಂಡು ಕೋಣೆ ಸೇರಿ ವಿಷ ಕುಡಿದು ಮೃತಪಟ್ಟ ಸ್ಫುರದ್ರೂಪಿ ಯುವಕ!

ಮದುವೆಯಾಗದ ಬೇಸರದಲ್ಲೇ ಕುಡಿತದ ಚಟಕ್ಕೆ ದಾಸನಾದ ಯುವಕನೊಬ್ಬ ಮನೆಯಲ್ಲಿದ್ದ ತನ್ನ ರೂಮ್ ಗೆ ಬಣ್ಣ ಬಳಿಯುತ್ತೇನೆ ಎಂದು ಸುಳ್ಳು ಹೇಳಿ ಒಳಗೆ ಸೇರಿಕೊಂಡು ವಿಷ ಕುಡಿದು ಮೃತಪಟ್ಟ ಘಟನೆಯೊಂದು ನಡೆದಿದೆ.

ಚಾಮರಾಜನಗರದ
ಹನೂರು ಪಟ್ಟಣದ ನಿವಾಸಿ ವಿನೋದ್ ಕುಮಾರ್( 34) ಮೃತ ಯುವಕ. ಈತ ಮಾ.17ರಂದು ಮನೆಯಲ್ಲಿದ್ದ ತನ್ನ ರೂಮ್‌ನೊಳಗೆ ವಿಷ ಕುಡಿದಿದ್ದಾನೆ. ವಿಷಯ ತಿಳಿದ ಮನೆಯವರು ಈತನನ್ನು ಕೊಳ್ಳೇಗಾಲದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರದ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ವಿನೋದ್ ಶುಕ್ರವಾರ ಮೃತಪಟ್ಟಿದ್ದಾನೆ.

ಮೃತ ವಿನೋದ್ ಗೆ ಐವರು ಅಣ್ಣಂದಿರು, ಒಬ್ಬಳು ತಂಗಿ ಇದ್ದಾಳೆ. ಎಲ್ಲರಿಗೂ ಮದುವೆಯಾಗಿದೆ. ವಿನೋದ್‌ಗೆ ಮಾತ್ ಅವಿವಾಹಿತನಾಗಿದ್ದ. ಇದೇ ಬೇಸರದಲ್ಲಿ ಕುಡಿಯೋದು ಕಲಿತ. ಹನೂರು ಅರಣ್ಯ ಇಲಾಖೆ ಕಚೇರಿಯಲ್ಲಿ ಮಾಡುತ್ತಿದ್ದ ಕಂಪ್ಯೂಟರ್ ಆಪರೇಟರ್ ಕೆಲಸ ಕಳೆದುಕೊಂಡ. ನಂತರ ಬೆಂಗಳೂರಲ್ಲಿ ಫ್ಯಾಕ್ಟರಿಯಲ್ಲೂ ದುಡಿಯಲಾಗದೆ ಊರಿಗೆ ಮರಳಿದ್ದ. ಮದುವೆ ಆಗಿಲ್ಲವೆಂಬ ಬೇಸರ, ಜೀವನದಲ್ಲಿ ಜಿಗುಪ್ಪೆ ಬಂದು ಪೇಂಟ್ ಜೊತೆ ವಿಷ ತಂದು ರೂಂ ಒಳಗೆ ಹೋಗಿ ಕುಡಿದ್ದಾನೆ ಎಂದು ಮೃತನ ತಂದೆ ಸಿದ್ದಯ್ಯ ಹನೂರು ಠಾಣೆಗೆ ದೂರು ನೀಡಿದ್ದಾರೆ.

Leave A Reply