ಧೋನಿ ಅವರ ಜೆರ್ಸಿ ನಂಬರ್‌ 7 ಯಾಕೆ ?; ಗುಟ್ಟನ್ನು ರಟ್ಟು ಮಾಡಿದ ಧೋನಿ

ಕ್ರಿಕೇಟ್ ದೈತ್ಯ ಪ್ರತಿಭೆ ಮಹೇಂದ್ರ ಸಿಂಗ್ ಧೋನಿ. ಧೋನಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಧೋನಿ ಏನೆ ಮಾಡಿದರು ಅದು ಅನುಕರಣಿಯ ಮತ್ತು ಸುದ್ದಿಯಾಗುತ್ತದೆ.
ಮಹೇಂದ್ರ ಸಿಂಗ್ ಧೋನಿ ಅವರ ಜೆರ್ಸಿ ನಂಬರ್‌ 7. ಸಾಕಷ್ಟು ಮಂದಿ ಅವರ ಜೆರ್ಸಿ ನಂಬರ್ 7 ಯಾಕೆ ಎಂಬುದರ ಬಗ್ಗೆ ಹಲವಾರು ರೀತಿಯ ಮಾತನಾಡುತ್ತಾರೆ. ಧೋನಿ ಅಭಿಮಾನಿಗಳು ಅವರ ಶರ್ಟ್ ಮೇಲೂ ನಂಬರ್ 7 ಬರೆಸುತ್ತಾರೆ. ಧೋನಿ ಜೆರ್ಸಿ ನಂಬರ್ 7 ಏಕೆ ಎಂದು ಅವರೇ ಆ ಗುಟ್ಟನ್ನು ರಟ್ಟು ಮಾಡಿದ್ದಾರೆ. ನೋಡಿ

ಜನರು ನನಗೆ 7 ಅದೃಷ್ಟದ ಸಂಖ್ಯೆ ಎಂದು ಭಾವಿಸಿದ್ದರು. ಆಗಾಗ ಜನರು ನನ್ನನ್ನು ಕೇಳುತ್ತಲೇ ಇದ್ದರು. ನಾನು ಅದೃಷ್ಟದ ಸಂಖ್ಯೆ ಎಂಬ ಮೂಢನಂಬಿಕೆಯನ್ನು ಹೊಂದಿಲ್ಲ. 7 ನನ್ನ ಹೃದಯಕ್ಕೆ ಹತ್ತಿರವಾದ ಸಂಖ್ಯೆ. ನಾನು ಜುಲೈ 7ರಂದು ಜನಿಸಿದ ಕಾರಣದಿಂದಾಗಿ ನಾನು ಜೆರ್ಸಿ ನಂಬರ್​ 7 ಅನ್ನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.


Ad Widget

Ad Widget

Ad Widget

ಇನ್ನೊಂದು ಗಣಿತದ ಲೆಕ್ಕಾಚಾರ ವನ್ನು ಜನತೆ ಎದುರು ಬಿಡಿಸಿ ಇಟ್ಟಿದ್ದಾರೆ ಧೋನಿ ; ಜುಲೈ ಅಂದರೆ ಏಳನೇ ತಿಂಗಳು. ನಾನು ಹುಟ್ಟಿದ ವರ್ಷ 1981. ಕೊನೆಯ ಎರಡು ಸಂಖ್ಯೆಗಳನ್ನು ತೆಗೆದು, ಪ್ರತ್ಯೇಕವಾಗಿ ಕಳೆದರೆ 7 ಬರುತ್ತದೆ. ಇದರಿಂದಾಗಿ 7 ಸಂಖ್ಯೆ ನನಗೆ ತುಂಬಾ ಹತ್ತಿರವಾಗಿದೆ ಎಂದು ಧೋನಿ ಹೇಳಿದ್ದಾರೆ.

Leave a Reply

error: Content is protected !!
Scroll to Top
%d bloggers like this: