ಗಂಡನಿಗಾಗಿ ಧರಣಿಗೆ ಕುಳಿತ ಪತ್ನಿ ; ಆಗಿದ್ದಾದರೂ ಏನು ? ; ಇಲ್ಲಿದೆ ವಿಚಿತ್ರ ಪ್ರೇಮ್ ಕಹಾನಿ

ಪ್ರೀತಿಸಿ ಮದುವೆಯಾದ ಗಂಡನಿಗಾಗಿ ಪ್ರೌಢಶಾಲಾ ಶಿಕ್ಷಕಿಯೊಬ್ಬಳು ಇದೀಗ ಧರಣಿ ಕುಳಿತಿದ್ದಾಳೆ. ಶಿಕ್ಷಕಿ ಶಾಲೆಗೆ ಹೋಗುವ ಬದಲು, ಪತಿ ಮನೆಯೆದರು ಕುಳಿತಿದ್ದಾರೆ. ಗಂಡನಿಲ್ಲದೇ ನಾನು ಇಲ್ಲಿಂದ ಹೋಗುವುದಿಲ್ಲ ಎಂದು ಗಂಡನಿಗಾಗಿ ಗಂಡನ ಮನೆಯ ಮುಂದೆಯೇ ಶಿಕ್ಷಕಿ ಪ್ರತಿಭಟನೆಗೆ ಕುಳಿತಿದ್ದಾರೆ.

ಶಿಕ್ಷಕಿ  ಶಾಂತಾಬಾಯಿ ಪ್ರತಾಪ್​ ಎಂಬುವವರನ್ನು ಪ್ರೀತಿಸಿ 2017ರ ಅಕ್ಟೋಬರ್​ನಲ್ಲಿ ಮದುವೆಯಾಗಿದ್ದರು. ಶಾಂತಾಬಾಯಿಗೆ ಈ ಮೊದಲೇ ಮದುವೆ ಯಾಗಿತ್ತು. ಆದರೆ, ಗಂಡನಿಗೆ ಡಿವೋರ್ಸ್ ಕೊಟ್ಟಿದ್ದರು. ಶಾಂತಾಬಾಯಿಯನ್ನ ಪ್ರತಾಪ್​, ಪ್ರೀತಿಸಿ ಮದ್ವೆಯಾಗಿದ್ದ. ಆದರೆ ಪ್ರತಾಪ್ ಮನೆಯವರಿಗೆ ಹೆದರಿ ಶಾಂತಾಬಾಯಿಯ ಜೊತೆ ಮದುವೆಯಾಗಿರುವ ವಿಚಾರವನ್ನು ಮುಚ್ಚಿಟ್ಟು ಮನೆಯವರ ಒತ್ತಾಯಕ್ಕೆ ಮಣಿದು ಶಾಂತಾಬಾಯಿ ಬಿಟ್ಟು 2018ರಲ್ಲಿ ಇನ್ನೊಬ್ಬಳ ಜತೆ ಮದುವೆಯಾಗಿದ್ದಾನೆ.


Ad Widget

Ad Widget

Ad Widget

ಅಂತರ್ಜಾತಿ  ಕಾರಣ ನೀಡಿ, ಶಾಂತಾಬಾಯಿ ಬಿಟ್ಟು ಮನೆಯವರು ಹೇಳಿದ ಹುಡುಗಿ ಜೊತೆ ಪ್ರತಾಪ  ಮತ್ತೊಂದು ಮದ್ವೆಯಾಗಿದ್ದಾರೆ.ಇದೀಗ ಮೋಸ ಮಾಡಿರುವ ಪ್ರತಾಪ್ ಹಾಗೂ ಕುಟುಂಬಸ್ಥರ ವಿರುದ್ಧ ದೇವದುರ್ಗ ಠಾಣೆಯಲ್ಲಿ ಅನ್ಯಾಯಕ್ಕೊಳಗಾದ ಶಿಕ್ಷಕಿ ಶಾಂತಾಬಾಯಿಯಿಂದ ಪ್ರಕರಣ ದಾಖಲು ಮಾಡಿದ್ದಾರೆ. ಅಷ್ಟೆ ಅಲ್ಲದೆ. ಪತಿಯ ಮನೆಯೆದರು ಶಾಂತಾಬಾಯಿ ಧರಣಿ ಕುತಿದ್ದಾರೆ.

Leave a Reply

error: Content is protected !!
Scroll to Top
%d bloggers like this: