ವಾಟ್ಸಪ್ ನಲ್ಲಿ ಬರುವ “ದಿ ಕಾಶ್ಮೀರ್ ಫೈಲ್ಸ್” ಸಿನಿಮಾ ಡೌನ್ಲೋಡಿಂಗ್ ಲಿಂಕನ್ನು ಅಪ್ಪಿತಪ್ಪಿಯೂ ಕ್ಲಿಕ್ ಮಾಡಬೇಡಿ | ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಗೆ ಬೀಳಲಿದೆ ಕನ್ನ !!
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಿಡುಗಡೆಯಾದಾಗಿನಿಂದ ದೇಶದಲ್ಲಿ ಹೊಸ ಸಂಚಲನ ಮೂಡಿಸಿದೆ. ಕಾಶ್ಮೀರಿ ಪಂಡಿತರು ಅನುಭವಿಸಿದ ಹಿಂಸಾಚಾರ ಹಾಗೂ ವಲಸೆಯ ನಿಜ ಕಥೆಯಾದಾರಿತ ಸಿನಿಮಾಗೆ ಜನಸಾಮಾನ್ಯರಿಂದ ಹಿಡಿದು ದೊಡ್ಡ ದೊಡ್ಡ ರಾಜಕಾರಣಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆಲ ರಾಜ್ಯ ಸರ್ಕಾರಗಳು ಈ ಸಿನಿಮಾವನ್ನು ಜನರಿಗೆ ತೋರಿಸುವ ಸಲುವಾಗಿ ಟ್ಯಾಕ್ಸ್ ರಹಿತ ಟಿಕೆಟ್ ಒದಗಿಸಿದೆ. ಇದೀಗ ವಾಟ್ಸಪ್‌ನಾದ್ಯಂತ ದಿ ಕಾಶ್ಮೀರದ ಫೈಲ್ಸ್ ಸಿನಿಮಾದ ಡೌನ್ಲೋಡಿಂಗ್ ಲಿಂಕ್‌ಗಳು ಶೇರ್ ಆಗುತ್ತಿದ್ದು, ಈ ಲಿಂಕ್‌ಗಳನ್ನು ವಂಚನೆಗಾಗಿ ಕಿಡಿಗೇಡಿಗಳು ಹಂಚುತ್ತಿದ್ದಾರೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಚಲನಚಿತ್ರವನ್ನು ಉತ್ತಮ ಗುಣಮಟ್ಟದಲ್ಲಿ ಡೌನ್‌ಲೋಡ್ ಮಾಡಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಎಂಬ ಸಂದೇಶದೊಂದಿಗೆ ಶೇರ್ ಆಗುತ್ತಿದೆ. ಲಿಂಕ್ ಕ್ಲಿಕ್ ಮಾಡಿ ಡೌನ್‌ಲೋಡ್ ಮಾಡಿದ ವಾಟ್ಸಪ್ ಬಳಕೆದಾರರು ಬಳಿಕ ತಮ್ಮ ಬ್ಯಾಂಕ್ ಖಾತೆಗಳಿಂದ ಹಣವನ್ನು ಕಳೆದುಕೊಂಡಿರುವುದಾಗಿ ಹಲವೆಡೆ ವರದಿಯಾಗಿದೆ.
ವಾಟ್ಸಪ್ ಬಳಕೆದಾರರು ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ಹ್ಯಾಕರ್‌ಗಳು ಈ ಲಿಂಕ್‌ಗಳ ಮುಖಾಂತರ ಜನರ ಗೌಪ್ಯ ಮಾಹಿತಿಗಳನ್ನು ಪಡೆಯುತ್ತಿದ್ದಾರೆ ಹಾಗೂ ಬ್ಯಾಂಕ್ ಖಾತೆಗಳನ್ನು ಪ್ರವೇಶಿಸಿ ಹಣವನ್ನು ದೋಚುವ ಹುನ್ನಾರ ನಡೆಸಿದ್ದಾರೆ. ಹೀಗಾಗಿ ಇಂತಹ ಲಿಂಕ್‌ಗಳನ್ನು ಕ್ಲಿಕ್ ಮಾಡಿ ವಂಚನೆಗೆ ಒಳಗಾಗದೇ ಎಚ್ಚರವಹಿಸುವಂತೆ ಸೈಬರ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ದಿ ಕಾಶ್ಮೀರ್ ಫೈಲ್ಸ್ ಚಿತ್ರ ದೇಶಾದ್ಯಂತ ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದು, ನೈಜ ಕಥೆಯಾಧಾರಿತ ಸಿನಿಮಾವನ್ನು ವೀಕ್ಷಿಸಲು ಜನರು ಥಿಯೇಟರ್‌ನೆಡೆಗೆ ಓಡುತ್ತಿದ್ದಾರೆ. ಭಾರೀ ಕುತೂಹಲ ಮೂಡಿಸಿರುವ ಸಿನಿಮಾವನ್ನೇ ಮುಂದಿಟ್ಟುಕೊಂಡು ಸೈಬರ್ ವಂಚಕರು ಲಾಭ ಪಡೆಯಲು ಯತ್ನಿಸುತ್ತಿದ್ದಾರೆ.