ಆತಂಕ ಸೃಷ್ಟಿಸಿದ 100 ರಣಹದ್ದುಗಳ ಸಾವು ! ; ಭಯಭೀತರಾದ ಜನ

ಅಸ್ಸಾಂನ ಕಾಮ್ರೂಪ್ ಜಿಲ್ಲೆಯ ಛಾಯ್ಗಾಂವ್ ಪ್ರದೇಶದ ಬಳಿ ಅಳಿವಿನ ಅಂಚಿನಲ್ಲಿರುವ ಸುಮಾರು 100 ರಣಹದ್ದುಗಳು ಮೃತಪಟ್ಟಿದೆ. 100 ರಣಹದ್ದುಗಳು ಒಟ್ಟಿಗೆ ಸತ್ತಿರುವುದು ಜನರಿಗೆ ಆಶ್ಚರ್ಯ, ಆತಂಕ, ಗೊಂದಲಗಳಿಗೆ ಕಾರಣವಾಗಿದೆ.  ಜನ ಇದು ಯಾವ ಹೊಸ ರೋಗ ? ಏನೀ ಅಪಶುನ ಎಂದು ಭಯಭೀತರಾಗಿದ್ದಾರೆ.

 

ಅಸ್ಸಾಂನ ಛಯ್ಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯ ಮಿಲನ್ಪುರ ಪ್ರದೇಶದಲ್ಲಿ ರಣಹದ್ದುಗಳ ಮೃತದೇಹಗಳನ್ನು ವಶಪಡಿಸಿಕೊಂಡಿದ್ದಾರೆ. ಅರಣ್ಯ ವಿಭಾಗದ ಜಿಲ್ಲಾ ಅರಣ್ಯ ಅಧಿಕಾರಿ (ಡಿಎಫ್‌ಒ) ಡಿಂಪಿ ಬೋರಾ, ಅಸ್ಸಾಂನಲ್ಲಿ ಇದೇ ಮೊದಲ ಬಾರಿಗೆ 100 ರಣಹದ್ದುಗಳು ಮೃತಪಟ್ಟಿದುವುದು ಬೆಳಕಿಗೆ ಬಂದಿದೆ ಎಂದಿದ್ದಾರೆ.

ರಣಹದ್ದುಗಳ ಮರಣೋತ್ತರ ಪರೀಕ್ಷೆ ನಡೆಸಿದ ಅಧಿಕಾರಿಗಳು ರಣಹದ್ದುಗಳು ವಿಷಪೂರಿತ ಮೇಕೆಯ ಮೃತದೇಹವನ್ನು ತಿಂದು ರಣಹದ್ದುಗಳು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ರಣಹದ್ದುಗಳ ಶವದ ಬಳಿ ಮೇಕೆ ಮೂಳೆಗಳು ಪತ್ತೆಯಾಗಿವೆ.

Leave A Reply

Your email address will not be published.