ಮಗಳಿಗೆ ಅಪ್ಪ ಬೇಡ ಎಂದರೆ ಆಸ್ತಿ ಹಕ್ಕು ಕೂಡ ಇಲ್ಲ- ಸುಪ್ರೀಂಕೋರ್ಟ್

ಮಗಳಿಗೆ ಅಪ್ಪ ಎನ್ನುವ ಸಂಬಂಧ ಬೇಡ ಎಂದು ಅನಿಸಿದರೆ, ಆಕೆಗೆ ಅವನ ಆಸ್ತಿಯ ಮೇಲೆ ಯಾವುದೇ ಹಕ್ಕು ಇರುವುದಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಪಂಜಾಬ್-ಹರಿಯಾಣ ಹೈಕೋರ್ಟ್‍ನಲ್ಲಿ ವ್ಯಕ್ತಿಯೊಬ್ಬ ವಿಚ್ಛೇದನ ಅರ್ಜಿಯನ್ನು ಸಲ್ಲಿಸಿದ್ದನು. ಆದರೆ ಆ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಆತ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ. ಹೆಂಡತಿಯೂ ಸಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಈ ಹಿನ್ನೆಲೆ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ಎಂಎಂ ಸುಂದ್ರೇಶ್ ಇವರ ವಿಚಾರಣೆಯನ್ನು ಮಾಡಿದರು.


Ad Widget

Ad Widget

Ad Widget

ವಿಚಾರಣೆ ವೇಳೆ ಮಹಿಳೆಯು, ತನ್ನ ಮಗಳಿಗೆ ಶಿಕ್ಷಣ ನೀಡಲು ಮತ್ತು ಮದುವೆ ಮಾಡಿಸಲು ತನ್ನ ಗಂಡ ಹಣವನ್ನು ನೀಡಬೇಕು ಎಂದು ವಾದಿಸುತ್ತಾಳೆ. ಇದನ್ನು ನ್ಯಾಯಮೂರ್ತಿಗಳು ಆಲಿಸಿಕೊಂಡು ನಂತರ, ಜನ್ಮದಾರಭ್ಯ ತಾಯಿಯ ಜೊತೆಗೆ ಈ ಯುವತಿ 20 ವರ್ಷ ಕಳೆದಿದ್ದಾಳೆ. ಈ ನಡುವೆ ಆಕೆ ತನ್ನ ತಂದೆಯನ್ನು ಸಂಪರ್ಕ ಮಾಡಲು ಬಯಸಿಲ್ಲ. ಆಕೆಗೆ ‘ಅಪ್ಪ’ ಎನ್ನುವ ಸಂಬಂಧವೇ ಬೇಡ ಎಂದ ಮೇಲೆ ಆಕೆಯ ಜವಾಬ್ದಾರಿ ತಂದೆಯ ಮೇಲೆ ಇರುವುದಿಲ್ಲ. ಅವಳಿಗೆ ಈ ಸಂಬಂಧವೇ ಬೇಡ ಎಂದ ಮೇಲೆ ಆಕೆಯ ಶಿಕ್ಷಣ ಮತ್ತು ಮದುವೆಗೆ ತಂದೆಯಿಂದ ಹಣ ಪಡೆಯಲು ಅರ್ಹತೆ ಇರುವುದಿಲ್ಲ ಎಂದು ತೀರ್ಪು ನೀಡಿದ್ದಾರೆ.

ವಿಚ್ಛೇದನಕ್ಕೆ ಸಮ್ಮತಿಸಿದ ನ್ಯಾಯಾಲಯ, ಮಹಿಳೆಯ ಜೀವನ ನಿರ್ವಹಣೆಗೆ ಪರಿಹಾರವಾಗಿ ತಿಂಗಳಿಗೆ 8,000 ರೂ. ಮತ್ತು ಅಂತಿಮವಾಗಿ 10 ಲಕ್ಷ ರೂ. ನೀಡಬೇಕು ಎಂದು ತೀರ್ಪು ಕೊಟ್ಟಿದೆ.

Leave a Reply

error: Content is protected !!
Scroll to Top
%d bloggers like this: