ಕರಾವಳಿಯಲ್ಲಿ ಹೆಚ್ಚಿದ ಕೋಳಿ ಹಂದಿ ರೇಟ್ : ಹಂದಿಯನ್ನು ಹಿಂದಿಕ್ಕಿದ ಕೋಳಿ!
ಮಂಗಳೂರು: ಕೋಳಿ ಮಾಂಸದ ಬೆಲೆ ಎಲ್ಲರಿಗೂ ತಿಳಿದಿರುವ ಹಾಗೇ ಹೆಚ್ಚುತ್ತಲೇ ಇದೆ. 100-150ರ ದರದ ಆಸುಪಾಸಿನಲ್ಲಿದ್ದ ಚಿಕನ್ ರೇಟ್ ಈಗ 250ರ ಗಟಿ ದಾಟಿದೆ. ಈ ಮೂಲಕ ಹಂದಿ ಮಾಂಸದ ಬೆಲೆಯನ್ನು ಕೋಳಿ ಮಾಂಸದ ಬೆಲೆ ಮೀರಿಸಿದೆ.
ಗಗನಕ್ಕೇರಿರುವ ಕೋಳಿ ಮಾಂಸದ ದರದಿಂದ ಮಾಂಸ ಪ್ರಿಯರು ಕಂಗೆಟ್ಟಿದ್ದು, ಇದೀಗ ಮತ್ತೆ 50 ರೂಪಾಯಿಗಳ ಏರಿಕೆಗೆ ತತ್ತರಿಸಲಿದ್ದಾರೆ.
ಈಗ ಮಂಗಳೂರಿನಲ್ಲಿ ಹಂದಿ ಮಾಂಸದ ದರ ಸರಾಸರಿ 220 ರಿಂದ 240 ರ ಆಸುಪಾಸಿನಲ್ಲಿದ್ದರೆ, ಕೋಳಿ ಮಾಂಸದ ಬೆಲೆ ಮಾತ್ರ 250 ಆಗಿದೆ. ಈ ಮೂಲಕ ಕೋಳಿ ಮಾಂಸದ ಖಾದ್ಯಗಳ ಬೆಲೆಯೂ ಹೆಚ್ಚಳವಾಗಿದ್ದು, ಕೋಳಿ ಖಾದ್ಯ ಪ್ರಿಯರ ಕಿಸೆಗೆ ಕತ್ತರಿ ಬೀಳುವುದರಲ್ಲಿ ಸಂಶಯವಿಲ್ಲ.
ಫಾರಂನಲ್ಲಿ ಕೋಳಿಯ ಬೆಲೆ ಕೆಜಿಗೆ 125 ರೂ. ಇದ್ದು, ಮಾರುಕಟ್ಟೆಯಲ್ಲಿ ,
ಕೋಳಿ ಬೆಲೆ ಕೆ.ಜಿಗೆ 180ರಿಂದ 200 ರೂಪಾಯಿಗೆ ತಲುಪಿದೆ. ಅದೇ ಕೋಳಿ ಮಾಂಸದ ಬೆಲೆ 220 ರಿಂದ 250ಕ್ಕೆ ಏರಿಕೆಯಾಗಿದೆ.
ಇದಕ್ಕೆ ಕೋಳಿ ಆಹಾರ ದುಬಾರಿಯಾಗಿರುವುದು ಮುಖ್ಯ ಕಾರಣ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಈಗ ಸೆಕೆ ಅಧಿಕಗೊಂಡಿರುವುದರಿಂದ ಕೋಳಿಗಳು ಫಾರಂನಲ್ಲಿ ಹಠಾತ್ತನೆ ಸಾಯುತ್ತಿವೆ.
ಹೀಗಾಗಿ ಕೋಳಿಯ ಪೂರೈಕೆ ಕಡಿಮೆಯಾಗುತ್ತಿದೆ.
ಹೀಗಾಗಿ ಕೋಳಿ ಉತ್ಪಾದನೆ ತುಸು ಕಡಿಮೆಗೊಂಡಿದೆ.