ಬೆಳ್ತಂಗಡಿ: ಆಕ್ಟಿವಾ ಮತ್ತು ಸರ್ಕಾರಿ ಬಸ್ ನಡುವೆ ಭೀಕರ ಅಪಘಾತ | ಬಸ್ಸಿನಡಿ ಸಿಲುಕಿದ ಸ್ಕೂಟರ್, ಸವಾರರಿಬ್ಬರೂ ಮೃತ್ಯು

ಬೆಳ್ತಂಗಡಿ : ಆಕ್ಟಿವಾ ಮತ್ತು ಸರ್ಕಾರಿ ಬಸ್ ನಡುವೆ ಭೀಕರ ಅಪಘಾತವಾಗಿದ್ದು, ಹಿರೆಭಂಡಾಡಿಯ ಸಹೋದರರು ಮೃತ ಪಟ್ಟ ಘಟನೆ ಇಂದು ಸಂಜೆವೇಳೆ ನಂದಿಬೆಟ್ಟ ಬಳಿ ನಡೆದಿದೆ.

ಮೃತರನ್ನು ಉಪ್ಪಿನಂಗಡಿ ಸನಿಹದ ಹಿರೆಬಂಡಾಡಿ ನಿವಾಸಿ, ನಿವೃತ ಶಿಕ್ಷಕ, ಮರ್ಹೂಮ್ ಅಬ್ದುರ್ರಝಾಕ್ ಅವರ ಮಕ್ಕಳಾದ ಹಮ್ಮಬ್ಬ ಸಿರಾಜ್ ಮತ್ತು ಕಜುತುಬುದ್ದೀನ್ ಸಾದಿಕ್ ಎಂಬವರೆಂದು ಗುರುತಿಸಲಾಗಿದೆ.

ಧರ್ಮಸ್ಥಳದಿಂದ -ಕುಂದಾಪುರ ಕಡೆಗೆ ತೆರಳುತ್ತಿದ್ದ ಬಸ್ ಮತ್ತು ಸ್ಕೂಟರ್ ನಡುವೆ ಮೂಡುಬಿದ್ರೆ ರೋಡ್ ನಲ್ಲಿ ಈ ಅಪಘಾತ ಸಂಭವಿಸಿದೆ. ಆಕ್ಟಿವಾ ಬಸ್ ನಡಿಗೆ ಬಿದ್ದಿದ್ದು, ಸವಾರರಿಬ್ಬರೂ ಮೃತಪಟ್ಟಿದ್ದಾರೆ.ಇಬ್ಬರೂ ಸಹೋದರರು ವಿದೇಶದಲ್ಲಿ ಉದ್ಯೋಗಸ್ತರಾಗಿದ್ದು ಕಳೆದ ಐದು ತಿಂಗಳಿಂದ ಊರಿಗೆ ಮರಳಿದ್ದರೆಂದು ತಿಳಿದುಬಂದಿದೆ.

ಗುರುವಾರವಷ್ಟೇ ವೇಣೂರಿನಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದ ನಾಲ್ಕು ವರ್ಷ ಪ್ರಾಯದ ಅಣ್ಣನ ಮಗನ ಮರಣದ ಮನೆಗೆ ಹೋಗಿ ವಾಪಾಸಾಗುತ್ತಿದ್ದಾಗ ಘಟನೆ ಆಗಿದೆ. ಅಪಘಾತ ಆದ ತಕ್ಷಣ ಗಂಭೀರ ಸ್ಥಿತಿಯಲ್ಲಿದ್ದವರನ್ನು ಸ್ಥಳೀಯ ಗೋಳಿಯಂಗಡಿಯ ಮುನೀರ್, ಲೆತೀಫ್ ಮೊದಲಾದರು ಸಾರ್ವಜನಿಕರ ಸಹಕಾರದೊಂದಿಗೆ ಗಾಯಾಳುಗಳನ್ನು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕರೆತಂದರೂ ಅದಾಗಲೇ ಅವರು ಮೃತಪಟ್ಟಿದ್ದರು.

ಮೃತ ದೇಹವನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.

Leave A Reply