ಲವ್ ಜಿಹಾದ್ ಗೆ ಬಲಿಯಾದ 19 ರ ಯುವತಿ !! | ಹೆರಿಗೆಯಾದ ಐದೇ ದಿನಕ್ಕೆ ಕೊನೆಯುಸಿರೆಳೆದ ಭೂಮಿಕಾ

ಲವ್ ಜಿಹಾದ್ ಗೆ ಗೃಹಿಣಿಯೋರ್ವಳು ಬಲಿಯಾಗಿದ್ದಾಳೆ. ಪರಸ್ಪರ ಪ್ರೀತಿಸಿ ಅಂತರ್ ಧರ್ಮೀಯ ವಿವಾಹವಾಗಿದ್ದ ಯುವತಿ ಹೆರಿಗೆಯಾದ ಐದೇ ದಿನದಲ್ಲಿ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ನಡೆದಿದೆ.

 

ಮೃತಪಟ್ಟ ಗೃಹಿಣಿಯನ್ನು ಭೂಮಿಕಾ ಅಲಿಯಾಸ್ ಮುಸ್ಕಾನ್ ಭಾನು(19) ಎಂದು ಗುರುತಿಸಲಾಗಿದೆ.

ಭೂಮಿಕಾ ಸಾವಿಗೆ ಲವ್ ಜಿಹಾದ್ ಕಾರಣ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮದವಳಾದ ಭೂಮಿಕಾ ಪೋಷಕರು ಕಳೆದ ಎರಡು ವರ್ಷದ ಹಿಂದೆ ಮೃತಪಟ್ಟಿದ್ದರು. ಬಳಿಕ ಭೂಮಿಕಾ ಸೊರಬದ ತನ್ನ ಅಜ್ಜಿ ಮನೆಯಲ್ಲಿ ಆಶ್ರಯ ಪಡೆದಿದ್ದಳು. ಅಜ್ಜಿ ಮನೆಯಲ್ಲಿದ್ದುಕೊಂಡು ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಈ ವೇಳೆ ಭೂಮಿಕಾಳಿಗೆ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ಸಮೀರ್ ಎಂಬಾತನ ಪರಿಚಯವಾಗಿದೆ. ಪರಿಚಯ ನಂತರ ಇಬ್ಬರು ಪರಸ್ಪರ ಪ್ರೀತಿಸಲು ಆರಂಭಿಸಿದ್ದರು.

ಭೂಮಿಕಾ ಅಪ್ರಾಪ್ತಳಾಗಿದ್ದಾಗಲೇ ಸಮೀರ್ ವಿವಾಹ ಮಾಡಿಕೊಂಡಿದ್ದ. ವಿವಾಹದ ನಂತರ ಭೂಮಿಕಾ ಹೆಸರನ್ನು ಮುಸ್ಕಾನ್ ಭಾನು ಎಂದು ಬದಲಾಯಿಸಿದ್ದನಂತೆ ಪತಿ ಸಮೀರ್. ಮದುವೆ ನಂತರ ಭೂಮಿಕಾಳಿಗೆ ಆಕೆಯ ಕುಟುಂಬಸ್ಥರು ಭೇಟಿ ಮಾಡಲು ಅವಕಾಶ ನೀಡುತ್ತಿರಲಿಲ್ಲವಂತೆ. ಆಗಾಗ ಪತಿ ಸಮೀರ್ ಆತನ ತಾಯಿ ಹಾಗೂ ಸಹೋದರಿಯರು ಕಿರುಕುಳ ನೀಡುತ್ತಿದ್ದರು ಎಂದು ಮೃತ ಭೂಮಿಕಾ ಕುಟುಂಬಸ್ಥರು ಆರೋಪಿಸಿದ್ದಾರೆ.

ಗರ್ಭಿಣಿಯಾಗಿದ್ದ ಭೂಮಿಕಾಳಿಗೆ ಹೆರಿಗೆಗಾಗಿ ಕಳೆದ ವಾರ ಸೊರಬದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಭೂಮಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಈ ವೇಳೆ ಅಧಿಕ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ನಂತರ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೆಗ್ಗಾನ್ ಆಸ್ಪತ್ರೆಯಲ್ಲಿ ಸಹ ಭೂಮಿಕಾ ಚಿಕಿತ್ಸೆಗೆ ಸ್ಪಂದಿಸದ ಕಾರಣ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಭೂಮಿಕಾ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಆದರೆ ಭೂಮಿಕಾ ಮೃತಪಟ್ಟಿರುವ ವಿಷಯವನ್ನು ಸಮೀರ್ ಭೂಮಿಕಾ ಕುಟುಂಬಸ್ಥರಿಗೆ ತಿಳಿಸದೇ ಮುಚ್ಚಿಟ್ಟಿದ್ದ. ಭೂಮಿಕಾ ಕುಟುಂಬಸ್ಥರು ಮೃತದೇಹದ ಮರಣೋತ್ತರ ಶವ ಪರೀಕ್ಷೆ ನಡೆಸಲು ಮೆಗ್ಗಾನ್ ಆಸ್ಪತ್ರೆಗೆ ಕರೆ ತಂದಿದ್ದರು. ಅಲ್ಲದೇ ಭೂಮಿಕಾ ಸಾವಿಗೆ ಆಕೆಯ ಪತಿ ಸಮೀರ್, ಆತನ ತಾಯಿ ಮತ್ತು ಸಹೋದರಿಯರೇ ಕಾರಣ. ಇವರುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೊರಬ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave A Reply

Your email address will not be published.