‘ಕ್ಯಾಚ್ ಮಿ ಇಫ್ ಯೂ ಕ್ಯಾನ್ ‘ ಎಂದು ಪೊಲೀಸರಿಗೆ ಸವಾಲು ಹಾಕಿಹೋಗುತ್ತಿದ್ದ ಖತರ್ನಾಕ್ ಕಾರು ಕಳ್ಳ ಕೊನೆಗೂ ಪೊಲೀಸ್ ಬಲೆಗೆ
ಬೆಂಗಳೂರು:ಅದೆಷ್ಟೇ ಪದವೀಧರರಾದರು ತನ್ನ ಶ್ರೀಮಂತಿಕೆ ಹೆಚ್ಚಿಸಿಕೊಳ್ಳಲು ಅಡ್ಡ ದಾರಿ ಹಿಡಿಯುವಂತಹ ಘಟನೆಗಳನ್ನ ನಾವು ನೋಡಿದ್ದೇವೆ. ಅದೇ ರೀತಿ ಇಲ್ಲೊಬ್ಬ ಐಷಾರಾಮಿ ಜೀವನ ಶೈಲಿಗಾಗಿ ಕಾರುಗಳನ್ನು ಕಡಿಯುತ್ತಿದ್ದು, ಅಷ್ಟು ಮಾತ್ರ ಅಲ್ಲದೆ ಪೊಲೀಸರಿಗೆ ಸವಾಲು ಹಾಕಿ ಹೋಗುತ್ತಿದ್ದ. ಅನೇಕ ಕಾರುಗಳನ್ನು ಕದ್ದು ಪರಾರಿಯಾಗುತ್ತಿದ್ದ ಖತರ್ನಾಕ್ ಕಳ್ಳ ಇದೀಗ ಪೊಲೀಸ್ ಬಲೆಗೆ ಬಿದ್ದಿದ್ದಾನೆ.
ಐಷಾರಾಮಿ ಕಾರುಗಳನ್ನು ಕದಿಯುತ್ತಿದ್ದಂತ ಕುಖ್ಯಾತ ಖದೀಮ ಕಳ್ಳನೊಬ್ಬ, ಪೊಲೀಸರಿಗೆ ಕ್ಯಾಚ್ ಮಿ ಇಫ್ ಯೂ ಕ್ಯಾನ್ ಎಂಬುದಾಗಿ ಸವಾಲ್ ಹಾಕಿ,ತಪ್ಪಿಸಿಕೊಂಡು ಓಡಾಡುತ್ತಿದ್ದನು. ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದಂತ ಅಮೃತಹಳ್ಳಿ ಪೊಲೀಸರು, ರಾಜಸ್ಥಾನ ರಾಜ್ಯದ ಜೈಪುರ ನಗರದ ಪೊಲೀಸರಿಗೆ ಸವಾಲ್ ಹಾಕಿ ಹೋಗುತ್ತಿದ್ದಂತ ಸತ್ಯೇಂದ್ರ ಸಿಂಗ್ ಶೇಖಾವತ್ ಎಂಬಾತನನ್ನು ಬಂಧಿಸಿದ್ದಾರೆ
2003ರಿಂದ ಎಂಬಿಎ ಪದವೀಧರನಾಗಿದ್ದಂತ ಸತ್ಯೇಂದ್ರ ಸಿಂಗ್, ಐಷಾರಾಮಿ ಕಾರು ಕದಿಯೋದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದನು. ಇತ್ತೀಚಿಗೆ ತೆಲಂಗಾಣದಲ್ಲಿ ಕಾರು ಕದ್ದು, ಪೊಲೀಸರಿಗೆ ಕ್ಯಾಚ್ ಮಿ ಇಫ್ ಯೂ ಕ್ಯಾನ್ ಎಂಬುದಾಗಿ ಸವಾಲ್ ಹಾಕಿ ತೆರಳಿದ್ದನು. ಈ ಮಾಹಿತಿ ಆಧರಿಸಿ, ಸತ್ಯೇಂದ್ರ ಸಿಂಗ್ ಮಾಹಿತಿಯನ್ನು ನೆರೆ ರಾಜ್ಯದ ಪೊಲೀಸರ ಜೊತೆಗೂಡಿ ಕಲೆಹಾಕಿ, ಕೊನೆಗೂ ಬಂಧಿಸಿ ಜೈಲಿಗಟ್ಟಿದ್ದಾರೆ.
ಈತ ಕರ್ನಾಟಕ, ದೆಹಲಿ, ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ, ತೆಲಂಗಾಮ ಹಾಗೂ ತಮಿಳುನಾಡು ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈತನ ವಿರುದ್ಧ 40ಕ್ಕೂ ಹೆಚ್ಚು ಕಾರು ಕದ್ದಿರುವ ಪ್ರಕರಣಗಳಿವೆ. ಇತ್ತೀಚಿಗೆ ಬಂಧಿಸಿದಾಗ, ಆತನ ಬಳಿಯಿಂದ ಅಮೃತಹಳ್ಳಿ ಪೊಲೀಸರು 4 ಕೋಟಿ ಮೌಲ್ಯದ ಆಡಿ, ಟೊಯೋಟಾ ಫಾರ್ಚೂನರ್ ಸೇರಿದಂತೆ ವಿವಿಧ ಕಾರುಗಳನ್ನು ಜಪ್ತಿ ಮಾಡಿದ್ದಾರೆ.