ಕೊಣಾಜೆ: ಅಂಗನವಾಡಿಯ ಗ್ಯಾಸ್ ಸ್ಟವ್ ರಿಪೇರಿಗೆ ಬಂದ ಮುಸ್ಲಿಂ ವ್ಯಕ್ತಿಯಿಂದ ಸಹಾಯಕಿಯ ಮಾನಭಂಗಕ್ಕೆ ಯತ್ನ!! ಸೆರಗಿಗೆ ಕೈ ಹಾಕಿ, ಕಿರುಕುಳ ನೀಡಿದ್ದ ನಿಜಾಮುದ್ದೀನ್ ಬಂಧನ

0 6

ಮಂಗಳೂರು : ಅಂಗನವಾಡಿಯ ಗ್ಯಾಸ್ ಸ್ಟವ್ ರಿಪೇರಿಗೆಂದು ಬಂದಾತ ಅಂಗನವಾಡಿ ಸಹಾಯಕಿ ಮಹಿಳೆಯ ಕೈ ಎಳೆದು ಮಾನಭಂಗಕ್ಕೆ ಯತ್ನಿಸಿದ ಘಟನೆಯೊಂದು ಕೊಣಾಜೆಯಲ್ಲಿ ನಡೆದಿದೆ.

ಆರೋಪಿ ಅದೇಗ್ರಾಮದ ಆಲಡ್ಕ ನಿವಾಸಿ ನಿಝಾಮುದ್ದೀನ್(31)ನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.

ಹರೇಕಳ ಗ್ರಾಮದ ಅಂಗನವಾಡಿಯ ಸಹಾಯಕಿ ಅವಿವಾಹಿತ ಮಹಿಳೆಯ ಆರೋಪಿ ಕೈ ಎಳೆದು ಮಾನಭಂಗಕ್ಕೆ ಯತ್ನಿಸಿದ್ದಾನೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರಿಂದ ಆರೋಪಿಯನ್ನ ಕೊಣಾಜೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಅಂಗನವಾಡಿಯಲ್ಲಿದ್ದ ಗ್ಯಾಸ್ ಸ್ಟವ್ ಕೆಟ್ಟಿದ್ದರಿಂದ, ಅಂಗನವಾಡಿ ಟೀಚರ್ ಸಲಹೆಯಂತೆ ಅಂಗನವಾಡಿ ಸಹಾಯಕಿ ಗ್ಯಾಸ್ ಸ್ಟವ್ ರಿಪೇರಿ ಮಾಡುವ ಪರಿಚಯ ಇರುವ ಯುವಕ ನಿಝಾಮ್ ನನ್ನು ಅಂಗಡಿಗೆ ಕರೆ ಮಾಡಿ ಬರುವಂತೆ ತಿಳಿಸಿದ್ದರು. ಅದರಂತೆ ಬುಧವಾರ ಮಧ್ಯಾಹ್ನ ಆತ ಅಂಗನವಾಡಿಗೆ ಬಂದಿದ್ದಾನೆ. ಶಿಕ್ಷಕಿ ಆತನಿಗೆ ಅಡುಗೆ ಕೊಣೆಯಲ್ಲಿದ್ದ ಗ್ಯಾಸ್ ಸ್ಟವ್ ತೋರಿಸಿ ದುರಸ್ತಿ ಮಾಡಿ ಎಂದು ಹೇಳಿ ಮಕ್ಕಳಿರುವ ಕೊಠಡಿಗೆ ತೆರಳಿದ್ದಾರೆ. ಆರೋಪಿ ನಿಝಾಮ್ ಚೀಲದಲ್ಲಿ ಗ್ಯಾಸ್ ತುಂಬಿಸುವಾಗ ಪಕ್ಕದಲ್ಲಿದ್ದ ಅಡುಗೆ ಸಹಾಯಕಿಯ ಕೈ ಹಿಡಿದು ಎಳೆದಿದ್ದು ಆಕೆ ಆತನ ಕೈಯಿಂದ ತಪ್ಪಿಸಿಕೊಂಡಿದ್ದಾರೆ. ಅನಂತರ ಬೇಸರ ಮಾಡಬೇಡ ಎಂದು ಹೇಳಿದ್ದಾಗಿ ಯುವತಿ ದೂರಿದ್ದಾರೆ. ಆತ ತೆರಳಿದ ತಕ್ಷಣ ನಡೆದ ವಿಷಯವನ್ನು ಸಂತ್ರಸ್ತ ಶಿಕ್ಷಕಿಯ ಗಮನಕ್ಕೆ ತಂದಿದ್ದು ಶಿಕ್ಷಕಿ ಅಣ್ಣಂದಿರಿಗೆ ತಿಳಿಸುವಂತೆ ಸೂಚಿಸಿದ್ದಾರೆ. ಅನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕೊಣಾಜೆ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Leave A Reply