ಬರೋಬ್ಬರಿ 3 ವರ್ಷಗಳ ಬಳಿಕ ಅಣ್ಣತಂಗಿಯರ ಭೇಟಿ : ವರ್ಣಿಸಲಸಾಧ್ಯ ಈ ಭೇಟಿಯ ಕ್ಷಣ

ಅಪ್ಪ ಅಂದ್ರೆ ಆಕಾಶ ಹಾಗೆನೇ ಅಣ್ಣ ಅಂದ್ರೆ ಸದಾ ತಂಗಿಯ ಕಾವಲಿಗೆ ನಿಲ್ಲುವ ಆರಕ್ಷಕ. ಅಣ್ಣ ಅಂದ್ರೆ ಬೊಗಸೆ ಬೊಗಸೆ ಖುಷಿಯನ್ನು ತಂಗಿಗಾಗಿ ಹೊತ್ತು ತರೋ ಅಚ್ಚರಿ, ಅಣ್ಣ ಅಂದ್ರೆ ನಮ್ಮೆಲ್ಲ ಸೀಕ್ರೆಟ್‌ಗಳನ್ನು ಹೇಳಿಕೊಳ್ಳಬಲ್ಲಂಥ ಆತ್ಮೀಯ, ಅಣ್ಣ ಅಂದ್ರೆ ತಂಗಿಯ ಕನಸುಗಳಿಗೆ ಒತ್ತಾಸೆ ನೀಡುವವ, ಅಣ್ಣ ಅಂದ್ರೆ ತಂಗಿಯ ಬಾಲ್ಯದ ನೆನಪಿನ ಬುತ್ತಿ, ಅಣ್ಣ ಅಂದ್ರೆ ಸ್ವಲ್ಪ ಖಾರ, ಸ್ವಲ್ಪ ಹುಳಿ ಹೀಗೆ..ಬರೆದರೆ…ಮುಂದುವರೆಯುತ್ತಾ ಹೋಗುತ್ತದೆ..ಪದಗಳ ಸಾಲು. ಇಂಥ ಅಣ್ಣನೊಬ್ಬ ಇದ್ದ ತಂಗಿಯರಿಗೆಲ್ಲರಿಗೂ ಕೆಲವಷ್ಟು ಅನುಭವಗಳು ಇರುತ್ತವೆ. ಆದರೆ ನಾವು ನಿಮಗೆ ಇಲ್ಲಿ ಹೇಳಲಿಕ್ಕೆ ಹೊರಟಿರೋದು ಅಣ್ಣ ತನ್ನ ತಂಗಿಗೆ ಸರ್ಪೈಸ್ ನೀಡಲು ಹೋದಾಗ ಆದ ಕುತೂಹಲಕಾರಿ ಸನ್ನಿವೇಶದ ಬಗ್ಗೆ.

ಅಣ್ಣ ತನ್ನ ತಂಗಿಗೆ ಸರ್ಪ್ರೈಸ್ ನೀಡುವ ಸಲುವಾಗಿ ಮನೆಯ ಬಾಗಿಲಿಗೆ ಹೋಗುತ್ತಿರುವ ದೃಶ್ಯದಿಂದ ಈ ವೀಡಿಯೋ ಕ್ಲಿಪ್ ಪ್ರಾರಂಭವಾಗುತ್ತದೆ. ಹೀಗೆ ಬಾಗಿಲು ತೆರೆದ ತಕ್ಷಣ ಬಾಲಕಿಗೆ ಕಾಣಿಸುವುದು ಎದುರಿಗೆ ನಿಂತ ತನ್ನ ಹಿರಿಯ ಅಣ್ಣ. ಈ ದೃಶ್ಯ ನೋಡಿ ಬಾಲಕಿಗೆ ತನ್ನ ಕಣ್ಣನ್ನೇ ನಂಬಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಅವಳು ಅಕ್ಷರಶಃ ಸ್ತಂಭೀಭೂತಳಾಗಿ ನಿಂತು ಬಿಟ್ಟಿದ್ದಾಳೆ. ಯಾಕೆಂದರೆ, ಎದುರಿಗೆ ನಿಂತಿದ್ದ ಅಣ್ಣನನ್ನು ಈ ಬಾಲಕಿ ಭೇಟಿಯಾಗುತ್ತಿರುವುದು ಬರೋಬ್ಬರಿ ಮೂರು ವರ್ಷಗಳ ಬಳಿಕ…! ಈ ಅಣ್ಣ ಮೂರು ವರ್ಷಗಳ ಹಿಂದೆ ಪೋರ್ಚುಗಲ್‌ಗೆ ಹೋಗಿದ್ದ. ಇದಾದ ಬಳಿಕ ಇದೇ ಮೊದಲ ಬಾರಿಗೆ ಬಾಲಕಿ ತನ್ನ ಅಣ್ಣನನ್ನು ನೋಡುತ್ತಿರುವುದು. ಹೀಗೆ ತನ್ನ ಅಣ್ಣನನ್ನು ಕಂಡ ಕೂಡಲೇ ಈ ಹುಡುಗಿ ಬಿಗಿದಪ್ಪಿಕೊಂಡಿದ್ದಳು. `ತಂಗಿಯನ್ನು ಪ್ರೀತಿಯಿಂದ ಮುದ್ದಿಸಿದ್ದ. ಕ್ಷಣದಲ್ಲಿ ಬಾಲಕಿಗೆ ಕಣ್ಣೀರು ತಡೆದುಕೊಳ್ಳಲು ಆಗಲೇ ಇಲ್ಲ. ಮುದ್ದು ಹುಡುಗಿ ಅತ್ತು ಖುಷಿಪಟ್ಟಿದ್ದಳು.

ಈ ಸುಂದರ ಕ್ಷಣದ ವೀಡಿಯೋ ನಿಮಗಾಗಿ ಈ ಕೆಳಗೆ ನೀಡಲಾಗಿದೆ.

https://twitter.com/GoodNewsCorres1/status/1502863195672829955?ref_src=twsrc%5Etfw%7Ctwcamp%5Etweetembed%7Ctwterm%5E1502863195672829955%7Ctwgr%5E%7Ctwcon%5Es1_c10&ref_url=https%3A%2F%2Fd-31145790063673476469.ampproject.net%2F2203041950000%2Fframe.html

Leave A Reply

Your email address will not be published.