ಮೂರು ನಾಗರಹಾವಿನೊಂದಿಗೆ ಆಟಕ್ಕೆ ಕುಳಿತ ಯುವಕ|ಹಾವಿನ ಬಗೆಗೆ ಉತ್ಸಾಹಿಯಾಗಿದ್ದಾತನ ಸಾಹಸವೇ ಕೊನೆಗೆ ಆತನಿಗೆ ಮುಳುವಾಯ್ತು!

ಹಾವು ಕಂಡೊಡನೆ ದೂರ ಓಡೋರೇ ಜಾಸ್ತಿ. ಹಾವನ್ನು ನೋಡಿದ್ರೆ ಮಾತ್ರ ಅಲ್ಲ ಹೆಸರು ಕೇಳಿದ್ರೇನೇ ನಿಂತಲ್ಲಿಂದ ದೂರ ಸರಿಯೋರೆ ಹೆಚ್ಚು.ಅದ್ರಲ್ಲೂ ನಾಗರ ಹಾವು ಅಂದರೆ ಒಂಚೂರು ಜಾಸ್ತಿಯೇ ಭಯ. ಆದ್ರೆ ಇಲ್ಲೊಬ್ಬ ಯುವಕ ಒಂದಲ್ಲ,ಎರಡಲ್ಲ, ಮೂರು ನಾಗರ ಹಾವಿನ ಜೊತೆ ಆಟವಾಡಿದ್ದಾನೆ.ಆತನ ಧೈರ್ಯವೇ ಕೊನೆಗೆ ಆತನಿಗೆ ಮುಳುವಾಯಿತು.

ಹೌದು.ಈ ಯುವಕ ಮೂರು ನಾಗರಹಾವಿನೊಂದಿಗೆ ಆಟವಾಡಿ, ಕೊನೆಗೆ ಒಂದು ಹಾವು ಆತನ ಕಾಲಿಗೆ ಕಚ್ಚಿದೆ. ಈ ಭಯಾನಕ ದೃಶ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, 22 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.


Ad Widget

Ad Widget

Ad Widget

ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾಜ್ ಸಯೀದ್(20) ಎನ್ನುವ ಯುವಕ ಮೂರು ನಾಗರ ಹಾವುಗಳ ಎದುರು ಕುಳಿತು ಅವುಗಳೊಂದಿಗೆ ಆಟವಾಡಿದ್ದಾನೆ. ಟ್ವಿಟರ್​ನಲ್ಲಿ ಈ ಆತಂಕಕಾರಿ ವಿಡಿಯೋವನ್ನು ಐಎಫ್‌ಎ​ಸ್​ ಅಧಿಕಾರಿ ಸುಸಾಂತ್​ ನಂದ ಹಂಚಿಕೊಂಡಿದ್ದಾರೆ.ವಿಡಿಯೋದಲ್ಲಿ ಯುವಕ ಮೂರು ಹಾವುಗಳ ಎದುರು ಕುಳಿತು ಕೈಗಳನ್ನು ಆಡಿಸುತ್ತಾನೆ. ಅದಕ್ಕೆ ತಕ್ಕಂತೆ ಹಾವುಗಳು ಕುಣಿಯುತ್ತವೆ. ಅವುಗಳ ತಲೆಯನ್ನು ಮುಟ್ಟಿ ಹಾವುಗಳಿಗೆ ಕೋಪತರಿಸಿದ್ದಾನೆ. ಇದರಿಂದಾಗಿ ಒಂದು ಹಾವು ಹಾರಿ ಆತನ ಕಾಲಿಗೆ ಕಚ್ಚಿ ಹಿಡಿದಿದ್ದು,ಇದನ್ನು ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.

ಸದ್ಯ ಶಿರಸಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಸ್ನೇಕ್‌ಬೈಟ್ ಹೀಲಿಂಗ್ ಅಂಡ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷೆ ಮತ್ತು ಸಂಸ್ಥಾಪಕಿ ಪ್ರಿಯಾಂಕಾ ಕದಮ್ ಫೇಸ್‌ಬುಕ್ ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು ಸಯದ್ ಅವರನ್ನು ಹಾವು ಕಚ್ಚಿದ ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದು,ಆಸ್ಪತ್ರೆಗೆ ದಾಖಲಿಸಿದ ಸೈಯದ ಅವರಿಗೆ 46 ಆಯಂಟಿ ಬಯೋಟಿಕ್​ಗಳನ್ನು ನೀಡಲಾಗಿದೆ ಎಂದು ವರದಿ ತಿಳಿಸಿದೆ.

Leave a Reply

error: Content is protected !!
Scroll to Top
%d bloggers like this: