ಪೈಲಾರು ರಾಜೀವಿ ಗೋಳ್ಯಾಡಿ ವೇಗದ ನಡಿಗೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಅಮರಮುಡ್ನೂರು ಗ್ರಾಮದ ಪೈಲಾರು ನಿವಾಸಿ ರಾಜೀವಿ ಗೋಳ್ಯಾಡಿ ಯವರು ಮಾ.12 ಮತ್ತು 13 ರಂದು ಉಡುಪಿಯ ಅಜ್ಜರಕಾಡು ಮಹಾತ್ಮ ಗಾಂಧಿ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ನಲ್ಲಿ 5000 ಮೀಟರ್ ವೇಗದ ನಡಿಗೆಯಲ್ಲಿ ಹಾಗೂ 800 ಮತ್ತು 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಚಿನ್ನದ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

 

ಇವರು ಮೇ ತಿಂಗಳ 18 ರಿಂದ 23 ರ ತನಕ ಕೇರಳದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಈಕೆ ಕುಕ್ಕುಜಡ್ಕದಲ್ಲಿ ವರ್ಷಿತ್ ಬ್ಯೂಟಿ ಪಾರ್ಲರ್ ಮತ್ತು ಟೈಲರಿಂಗ್ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ.

Leave A Reply

Your email address will not be published.