ಕೊಯಿಲ : ಶಾಲೆಯ ಸಮೀಪದ ರಬ್ಬರ್ ತೋಟಕ್ಕೆ ಬೆಂಕಿ ,ಬೆಂಕಿ ನಂದಿಸಿದ ಶಾಲಾ ಮಕ್ಕಳು, ಸ್ತ್ರೀ ಶಕ್ತಿ ಸಂಘದವರು

ಕಡಬ : ಶಾಲಾ ಬಳಿಯ ಖಾಸಗಿ ರಬ್ಬರ್ ತೋಟಕ್ಕೆ ಹತ್ತಿಕೊಂಡ ಬೆಂಕಿಯನ್ನು ಶಾಲಾ ವಿದ್ಯಾರ್ಥಿಗಳು ಗಮನಿಸಿಲ್ಲದೆ ವಿದ್ಯಾರ್ಥಿಗಳು, ಶಿಕ್ಷಕರು, ಸ್ತ್ರೀಶಕ್ತಿ ಗುಂಪಿನ ಸದಸ್ಯರು ಮತ್ತು ಸ್ಥಳೀಯರ ನೆರವಿನೊಂದಿಗೆ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದ ಘಟನೆ ಕೊಯಿಲ ಗ್ರಾಮದ ಸಬಳೂರು ಸರಕಾರಿ ಹಿ.ಪ್ರಾ.ಶಾಲೆಯ ಬಳಿ ಮಾ.16 ರಂದು ನಡೆದಿದೆ.

ಸಬಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿಯ ರಜಾಕ್ ಆತೂರು ಎಂಬವರಿಗೆ ಸೇರಿದ ರಬ್ಬರ್ ತೋಟಕ್ಕೆ ಪಕ್ಕದ ವಿದ್ಯುತ್ ಪರಿವರ್ತಕದಿಂದ ವಿದ್ಯುತ್ ಕಿಡಿ ಜ್ವಾಲೆ ರಬ್ಬರ್ ತೋಟಕ್ಕೆ ಬಿದ್ದು ತೋಟಕ್ಕೆ ಬೆಂಕಿ ಹತ್ತಿ ಕೊಂಡಿರುವ ಕುರಿತು ವಿದ್ಯಾರ್ಥಿಗಳು ಮತ್ತು ಅಂಗನವಾಡಿಯಲ್ಲಿದ್ದ ಸ್ತ್ರೀಶಕ್ತಿ ಗುಂಪಿನವರು ಗಮನಿಸಿದಲ್ಲದೆ ತಕ್ಷಣ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ಸ್ತ್ರೀಶಕ್ತಿ ಗುಂಪಿನ ಸದಸ್ಯರು ಮತ್ತು ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.


Ad Widget

Ad Widget

Ad Widget

Leave a Reply

error: Content is protected !!
Scroll to Top
%d bloggers like this: