ತಾಮ್ರದ ಪಾತ್ರೆಯನ್ನು ಉಪಯೋಗಿಸುತ್ತಿದ್ದೀರೇ? ಹಾಗಾದರೆ ಬನ್ನಿ ಈ ಪಾತ್ರೆ ಫಳಫಳ ಹೊಳೆಯಲು ಇಲ್ಲಿದೆ ಕೆಲವೊಂದು ಸುಲಭ ಟಿಪ್ಸ್!
‘ ಆರೋಗ್ಯವೇ ಭಾಗ್ಯ ‘ ಎಂಬ ನಾಣ್ಣುಡಿಯನ್ನು ಇತ್ತೀಚಿನ ಜನ ಹೆಚ್ಚಾಗಿ ಪಾಲಿಸುತ್ತಾರೆ. ಹಾಗೆನೇ ಊಟದ ವಿಷಯದಲ್ಲಿ ತುಂಬಾ ಜಾಗರೂಕತೆಯಿಂದ ಇದ್ದಾರೆ. ನೀರು ಕುಡಿಯುವುದರ ಬಗ್ಗೆನೂ ಜನ ಯೋಚನೆ ಮಾಡುತ್ತಾರೆ. ತಾಮ್ರದ ಪಾತ್ರೆಯಲ್ಲಿಟ್ಟ ಆಹಾರ ಬಳಸುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮಾಗಿರುತ್ತದೆ ಎಂದು ಎಲ್ಲಾ ಕಡೆ ಇತ್ತೀಚಿನ ದಿನಗಳಲ್ಲಿ ತಾಮ್ರದ ಪಾತ್ರೆ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ತಾಮ್ರದ ಪಾತ್ರೆ ಎಷ್ಟು ಆರೋಗ್ಯಕ್ಕೆ ಮುಖ್ಯ ಅಂತ ಅನಿಸುತ್ತದೆಯೋ ಅದನ್ನು ನಿರ್ವಹಿಸುವುದು ಕೂಡಾ ಅಷ್ಟೇ ಕಷ್ಟ.
ಪಾತ್ರೆಯನ್ನು ಉಪಯೋಗಿಸಿದ ನಂತರ ಅದನ್ನು ತೊಳೆಯಲು ಮತ್ತು ಆಕರ್ಷಕವಾಗಿ ಕಾಣಲು ಸಿಂಪಲ್ ಟ್ರಿಕ್ಸ್ ಅಥವಾ ಟಿಪ್ಸ್ ಇಲ್ಲಿದೆ.ಮನೆಯಲ್ಲಿರುವ ಪದಾರ್ಥಗಳನ್ನೇ ಉಪಯೋಗಿಸಿ ಪಾತ್ರೆಯನ್ನು
ಶುಚಿಯಾಗಿಸಬಹುದು.
ಎಲ್ಲರಿಗೂ ಗೊತ್ತಿರುವ ಹಾಗೆ ನಿಂಬೆ ರಸ ಎಲ್ಲದಕ್ಕೂ ರಾಮಬಾಣ. ಹಾಗಾಗಿ ನಿಂಬೆ ರಸ ಮತ್ತು ಉಪ್ಪು ತಾಮ್ರದ ಪಾತ್ರೆ ಶುಚಿಗೊಳಿಸಲು ತುಂಬಾ ಉಪಯೋಗಕಾರಿ. ಪುಡಿ ಉಪ್ಪಿಗೆ ನಿಂಬೆ ರಸವನ್ನು ಮಿಶ್ರಣ ಮಾಡಿ ತೊಳೆಯುದರಿಂದ ಪಾತ್ರೆಯಲ್ಲಿರುವ ಕಲೆಯನ್ನು ಹೋಗಲಾಡಿಸಿ ಪಾತ್ರೆಯನ್ನು ಹೊಳಪಾಗಿಸುತ್ತದೆ.
ಹಾಗೆನೇ ವಿನಿಗರ್ ಕೂಡ ತಾಮ್ರದ ಪಾತ್ರೆಯನ್ನು ತುಂಬಾ ದಿನಗಳ ಕಾಲ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ವಿನಿಗರ್ ಕೂಡ ನಿಮ್ಮ ದಿನ ಬಳಕೆಯ ಪದಾರ್ಥ. ವಿನಿಗರ್ಗೆ ಸಲ್ಪ ಉಪ್ಪನ್ನು ಸೇರಿಸಿ ಮಿಶ್ರಣ ಮಾಡಿ ಪಾತ್ರೆಯನ್ನು ಚೆನ್ನಾಗಿ ಉಜ್ಜಿ ತೊಳೆದರೆ ಚೆನ್ನಾಗಿ ಫಳಫಳ ಅಂತ ಹೊಳೆಯುತ್ತೆ.
ನಿಂಬೆ ಹಣ್ಣಿನ ಸಿಪ್ಪೆಯಿಂದ ಕೂಡ ತಾಮ್ರವನ್ನು ಹೊಳಪಾಗಿಸಬಹುದು. ನಿಂಬೆ ಹಣ್ಣಿನ ಸಿಪ್ಪೆಯನ್ನು ಬಿಸಾಡುವ ಬದಲು ಅದಕ್ಕೆ ಸ್ವಲ್ಪ ಉಪ್ಪನ್ನು ಸೇರಿಸಿಕೊಂಡು ಅದರಿಂದ ಪಾತ್ರೆಯನ್ನು ಉಜ್ಜಿ ತೊಳೆಯುವುದರಿಂದ ಪಾತ್ರೆಯನ್ನು ಇನ್ನಷ್ಟು ಹೊಳಪಾಗಿಸಬಹುದು.
ಕೆಚಪ್ (ಸಾಸ್) ನಲ್ಲಿ ಕೂಡಾ ನೈಸರ್ಗಿಕ ಆಮ್ಲೀಯ ಗುಣ ಇರುದರಿಂದ ತಾಮ್ರದ ಪಾತ್ರೆಯಲ್ಲಿರುವ ಕಲೆಗಳನ್ನು ನಿವಾರಣೆ ಮಾಡಲು ಇದು ತುಂಬಾ ಸಹಕಾರಿ. ಪಾತ್ರೆಯ ಮೇಲೆ ಕೆಚಪ್ ಹಚ್ಚಿ ಕೆಲವು ನಿಮಿಷಗಳ ಕಾಲ ಹಾಗೆ ಬಿಡಬೇಕು ನಂತರ ಸ್ಪಾಂಜ್ ಬಳಸಿ ಉಜ್ಜಿಕೊಂಡು ತೊಳೆದರೆ ನೀವು ಊಹಿಸದ ಫಲಿತಾಂಶ ದೊರಕುವುದು.
ಅಡುಗೆ ಸೋಡಾ ಕೂಡ ತಾಮ್ರದ ಪಾತ್ರೆಗೆ ಪ್ರಯೋಜನಕಾರಿ. ತಾಮ್ರದ ಪಾತ್ರೆ ತೊಳೆಯುವ ವೇಳೆ ಅಡುಗೆ ಸೋಡಾವನ್ನು ಬಳಸಿ. ಅಡುಗೆ ಸೋಡಾವನ್ನು ನಿಂಬೆ ರಸಕ್ಕೆ ಹಾಕಿಕೊಂಡು ಪಾತ್ರೆಯನ್ನು ತೊಳೆಯುದರಿಂದ ಪಾತ್ರೆಯಲ್ಲಿರುವ ಕಲೆಯನ್ನು ಮಾಯವಾಗಿಸಬಹುದು.