ಪತ್ರಕರ್ತನಾಗಿದ್ದರೂ ಕಾಶ್ಮೀರಿ ಪಂಡಿತರ ಸಂಕಷ್ಟದ ಬಗ್ಗೆ ಮೌನವಹಿಸಿದ್ದಕ್ಕೆ ಬೇಸರ | ಕನ್ನಡ ನಟ ಪ್ರಕಾಶ್ ಬೆಳವಾಡಿ ಕ್ಷಮೆಯಾಚನೆ !

ಬಹು ಚರ್ಚಿತ ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಇಂದಷ್ಟೆ ಬಿಡುಗಡೆ ಆಗಿದೆ. ಕಾಶ್ಮೀರಿ ಪಂಡಿತರ ಮೇಲೆ ನಡೆದ ಸುದೀರ್ಘ ರಕ್ತಸಿಕ್ತ ದೌರ್ಜನ್ಯದ ಕತೆಯನ್ನು ಸಿನಿಮಾ ಮಾದ್ಯಮಕ್ಕೆ ಹಂದಿ ಸಲಾಗಿದ್ದು ಇದೀಗ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗ ಈ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿ-ಬಿಸಿ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಕನ್ನಡ ಚಿತ್ರರಂಗದ ಹಿರಿಯ ನಟ, ಪ್ರಕಾಶ್ ಬೆಳವಾಡಿ ಕಾಶ್ಮೀರಿ ಪಂಡಿತರ ಕ್ಷಮೆ ಯಾಚಿಸಿದ್ದಾರೆ.

ಈ ಬಗ್ಗೆ ವಿಡಿಯೋ ಮಾಡಿ ಹೇಳಿರುವ ಬೆಳವಾಡಿ ಅವರು, ನಾನು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ನಟಿಸಿರುವುದಕ್ಕೆ ಹೆಮ್ಮೆ ಪಡುತ್ತೇನೆ. ವಿವೇಕ್ ಅಗ್ನಿಹೋತ್ರಿ ನನಗೆ ಈ ಸಿನಿಮಾದ ಚಿತ್ರಕತೆಯನ್ನು ಕಳಿಸಿದಾಗ ನನಗೆ ಗಾಬರಿಯಾಯಿತು, ಏಕೆಂದರೆ ಅಲ್ಲಿಯವರೆಗೆ ನನಗೆ, ಜಮ್ಮು ಮತ್ತು ಕಾಶ್ಮೀರದಿಂದ ಕಾಶ್ಮೀರಿ ಪಂಡಿತರನ್ನು ಹೊರಹಾಕಿದ ಆ ಕ್ರೂರ ಘಟನೆಯ ಬಗ್ಗೆ ಇಷ್ಟೊಂದು ಮಾಹಿತಿಯೇ ಇರಲಿಲ್ಲ” ಎಂದಿದ್ದಾರೆ ಪ್ರಕಾಶ್ ಬೆಳವಾಡಿ.

ಆ ಚಿತ್ರಕತೆ ಓದಿ, ಮಾಹಿತಿ ಪಡೆದುಕೊಂಡ ಬಳಿಕ ನನಗೆ ತೀರಾ ಅಪರಾಧಿ ಭಾವ ಕಾಡಿತು. ಅಲ್ಲಿ ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಹತ್ಯಾಕಾಂಡಗಳು ನಡೆಯುತ್ತಿದ್ದಾಗ ನಾನು ಆ ಸಮಯದಲ್ಲಿ ಪತ್ರಕರ್ತನಾಗಿದ್ದೆ. ಆದರೆ ನನಗೆ ಆ ಬಗ್ಗೆ ಮಾಹಿತಿ ಇರಲಿಲ್ಲ, ನಾನು ಅದನ್ನು ಜನರಿಗೆ ತಲುಪಿಸುವ ಕಾರ್ಯವನ್ನೂ ಮಾಡಲಾಗಲಿಲ್ಲ. ಹಾಗಾಗಿ ನಾನು ಕಾಶ್ಮೀರಿ ಪಂಡಿತರ ಕ್ಷಮೆ ಕೇಳುತ್ತೇನೆ. ಏಕೆಂದರೆ ಈ ಕ್ರೂರ ಘಟನೆ ಬಗ್ಗೆ ಮಾತನಾಡದ, ಮೌನವಾಗಿರುವ ಗುಂಪಿನ ಭಾಗವಾಗಿದ್ದಕ್ಕೆ ಪಂಡಿತರ ಕ್ಷಮೆ ನಾನು ಕೇಳುತ್ತೇನೆ” ಎಂದಿದ್ದಾರೆ. ಅಲ್ಲದೆ ”ನಾನು ವಿವೇಕ್ ಅಗ್ನಿಹೋತ್ರಿಗೆ ಧನ್ಯವಾದ ಹೇಳುತ್ತೇನೆ. ನಾನು ಅವರಿಗೆ ಆಭಾರಿಯಾಗಿರುತ್ತೇನೆ.

ನಿರ್ದೇಶಕರು ಅಂದು 1990 ರಲ್ಲಿ ನಡೆದ ಈ ಕ್ರೂರ ಘಟನೆಯ ಬಗ್ಗೆ ಸಂಶೋಧನೆ ನಡೆಸಿ, ಧೈರ್ಯದಿಂದ ಆ ಕತೆಯನ್ನು ಇಂದು ಜಗತ್ತಿಗೆ ತೋರಿಸುತ್ತಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ನೋಡಿ ಎಂದು ಎಲ್ಲ ಭಾರತೀಯರಲ್ಲಿ ಮನವಿ ಮಾಡುತ್ತೇನೆ.
ಭಾರತೀಯರಾಗಿ ನಮ್ಮದೇ ರಾಜ್ಯದಲ್ಲಿ ನಡೆದ ಈ ಘಟನೆ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ನ್ಯಾಯದ ಹಕ್ಕು’ (ರೈಟ್‌ ಟು ಜಸ್ಟಿಸ್) ಕಶ್ಮೀರಿ ಪಂಡಿತರಿಗೆ ದೊರಕಬೇಕು” ಎಂದಿದ್ದಾರೆ ಪ್ರಕಾಶ್ ಬೆಳವಾಡಿ. ವಿಡಿಯೋ ಅಪ್ ಲೋಡ್ ಮಾಡುವಂತೆ ನನ್ನ ಮೇಲೆ ಒತ್ತಾಯ ಹೇರಿದ ಅವರ ಸ್ನೇಹಿತ ಆರ್ .ಕೆ ಮಟ್ಟು ಅವರಿಗೆ ಧನ್ಯವಾದ ಹೇಳಿದ್ದಾರೆ. ಮಟ್ಟು ಅವರು ಕರ್ನಾಟಕದ ಕಾಶ್ಮೀರಿ ಪಂಡಿತರ ಸಮುದಾಯಕ್ಕೆ ನ್ಯಾಯ ಮತ್ತು ಸಾಮರಸ್ಯವನ್ನು ತರುವಲ್ಲಿ ಅವರು ನಾಯಕರಲ್ಲಿ ಒಬ್ಬರಾಗಿದ್ದಾರೆ.

Leave A Reply

Your email address will not be published.