SBI ಗ್ರಾಹಕರಿಗೊಂದು ಮಹತ್ವದ ಸೂಚನೆ | ಈ ಕೆಲಸ ನೀವು ಮಾಡದಿದ್ದರೆ ಮಾರ್ಚ್ 31 ರೊಳಗೆ ನಿಮ್ಮ ಡೆಬಿಟ್, ಕ್ರೆಡಿಟ್ ಕಾರ್ಡ್ ನಿಷ್ಕ್ರಿಯಗೊಳ್ಳುವುದು ಖಂಡಿತ!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಎಸ್ಬಿಐ ತನ್ನ ಖಾತೆದಾರರಿಗೆ ತಮ್ಮ ಪ್ಯಾನ್ (ಶಾಶ್ವತ ವಿಳಾಸ ಸಂಖ್ಯೆ) ಅನ್ನು ಆಧಾರ್ ಸಂಖ್ಯೆಯೊಂದಿಗೆ ಮಾರ್ಚ್ 31 ರೊಳಗೆ ಅಂದರೆ ಈ ತಿಂಗಳ ಅಂತ್ಯದೊಳಗೆ ಲಿಂಕ್ ಮಾಡಲು ಸೂಚನೆ ನೀಡಿತ್ತು. ಈ ಸೂಚನೆ ನೀಡಿ ಒಂದು ತಿಂಗಳೇ ಕಳೆದಿದೆಯಾದರೂ ಗಡುವು ಮುಕ್ತಾಯಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ.
ಬ್ಯಾಂಕಿಂಗ್ ಸೇವೆಗಳನ್ನು ಮುಂದುವರಿಸಲು ನಿಗದಿತ ದಿನಾಂಕದ ಮೊದಲು ಪ್ಯಾನ್-ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂದು ಬ್ಯಾಂಕ್ ತಿಳಿಸಿದೆ.
ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ದರೆ, ಪ್ಯಾನ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಮತ್ತು ನಿರ್ದಿಷ್ಟ ವಹಿವಾಟುಗಳನ್ನು ನಡೆಸಲು ಬಳಸಲಾಗುವುದಿಲ್ಲ ಎಂದು SBI ಸ್ಪಷ್ಟವಾಗಿ ತಿಳಿಸಿದೆ.
ತನ್ನ ವೆಬ್ಸೈಟ್ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆಯನ್ನು ಪೋಸ್ಟ್ ಮಾಡಿದೆ. ಕ್ರೆಡಿಟ್ ಕಾರ್ಡ್ಗಳಲ್ಲಿ ಸೇವೆಗಳನ್ನು ಪಡೆಯಲು ಪ್ಯಾನ್-ಆಧಾರ್ ಲಿಂಕ್ ಮಾಡುವುದು ಅವಶ್ಯಕ ಎಂದು ಹೇಳಿದೆ.
ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 139AA ಪ್ರಕಾರ, 2022 ರ ಮಾರ್ಚ್ 31 ರೊಳಗೆ ಆಧಾರ್ ಸಂಖ್ಯೆಯನ್ನು ಶಾಶ್ವತ ಖಾತೆ ಸಂಖ್ಯೆಯೊಂದಿಗೆ (PAN) ಲಿಂಕ್ ಮಾಡುವುದು ಕಡ್ಡಾಯವಾಗಿದೆ.