Pizza ಪ್ರಿಯರೇ ನಿಮಗೊಂದು ಕಹಿ ಸುದ್ದಿ | ಇನ್ನು ಮುಂದೆ ಪಿಜ್ಜಾ ತಿನ್ನಲು ನೀವು ತೆರಬೇಕು ದುಬಾರಿ ದುಡ್ಡು!
ಪಿಜ್ಜಾ ಪ್ರಿಯರಿಗೆ ನಿಮಗೊಂದು ಶಾಕಿಂಗ್ ಸುದ್ದಿ ಇದಾಗಿದೆ. ಪಿಜ್ಜಾ ಇದೀಗ ಮತ್ತಷ್ಟು ದುಬಾರಿ ಆಗಿದೆ. ಹೌದು, ಪಿಜ್ಜಾ ಟಾಪಿಂಗ್ ಮೇಲೆ ವಿಧಿಸಿರುವ ಜಿಎಸ್ಟಿ ದರದಿಂದ ಪಿಜ್ಜಾ ಇದೀಗ ಮತ್ತಷ್ಟು ದುಬಾರಿ ಆಗಿದೆ.
ಪಿಜ್ಜಾಗೆ ಮೂರು ತರದಲ್ಲಿ ದರ ಏರಿಸಲಾಗಿದ್ದು, ರೆಸ್ಟೋರೆಂಟ್ಗಳಲ್ಲಿ ತಯಾರಿಸಿ ಅಲ್ಲಿಯೇ ನೀವು ಪಿಜ್ಜಾಗಳನ್ನು ತೆಗೆದುಕೊಂಡರೆ ಎಂದರೆ ಅದರ ಮೇಲೆ 5% ಜಿಎಸ್ಟಿ ದರ ವಿಧಿಸಲಾಗುವುದು. ಜಿಎಸ್ಟಿ ಪಿಜ್ಜಾಗಳನ್ನು ಆರ್ಡರ್ ಮಾಡಿ ತರಿಸಿಕೊಂಡರೆ ಶೇ 18ರಷ್ಟು ಜಿಎಸ್ಟಿ ವಿಧಿಸಲಾಗುವುದು. ಇದರ ಹೊರತಾಗಿ ಕೂಡ GST ಮಾನದಂಡಗಳ ಪ್ರಕಾರ ಶೇ 12ರಷ್ಟು ತೆರಿಗೆ ವಿಧಿಸಲಾಗುತ್ತದೆ. ಈ ಮೂಲಕ ಪಿಜ್ಜಾ ಪ್ರಿಯರ ಜೇಬಿಗೆ ಕತ್ತರಿ ಬೀಳಲಿದೆ.