ಮಂಗಳೂರು: ದೂಜ ಪೂಜಾರಿ ಕುಟುಂಬಕ್ಕೆ ಬಡಿದ ಬರಸಿಡಿಲು!! ಮಾರಕ ಕ್ಯಾನ್ಸರ್ ಭೀತಿಯಿಂದ ನೇಣು ಕುಣಿಕೆಗೆ ಕೊರಳೊಡ್ಡಿದ ಉದ್ಯಮಿ!!

Share the Article

ಸದಾ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿ, ಮಂಗಳೂರು ನಗರದಲ್ಲಿ ಬಟ್ಟೆ ಮಳಿಗೆ ಹೊಂದಿದ್ದ ಉದ್ಯಮಿ ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ.

ಮೃತ ಮಹಿಳೆಯನ್ನು, ಭೂಮಿಕಾ ಟೆಕ್ಸ್ ಟೈಲ್ಸ್ ಮಾಲಕಿ, ಉದ್ಯಮಿ ಸುಮಾ ಸತೀಶ್ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಕ್ಯಾನ್ಸರ್ ಎಂಬ ಮಾರಕ ರೋಗ ಕ್ಕೆ ತುತ್ತಾಗಿರುವ ಬಗ್ಗೆ ತಿಳಿದು ಈ ನಿರ್ಧಾರ ಕೈಗೊಂಡಿರುವ ಶಂಕೆ ವ್ಯಕ್ತವಾಗಿದೆ.

ಸುಮಾ ಸತೀಶ್ ಅವರು ನಗರದ ಹೆಸರಾಂತ ಪಿಕೆ ದೂಜ ಪೂಜಾರಿ ಬಟ್ಟೆ ಮಳಿಗೆಯ ಅಂಗ ಸಂಸ್ಥೆಯಾದ ಭೂಮಿಕಾ ಟೆಕ್ಸ್ ಟೈಲ್ಸ್ ಮಾಲಕಿಯಾಗಿದ್ದು, ಮೃತರು ಪತಿ ಸತೀಶ್ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ ಎಂದು ತಿಳಿದುಬಂದಿದೆ.

Leave A Reply