ಮದುವೆಗೆ ವಿರೋಧಿಸಿದ ಪೋಷಕರ ಹತ್ಯೆಗೆ ಮಗಳೇ ಹಾಕಿದ್ದಳು ಸ್ಕೆಚ್ !!| 20 ರ ಪ್ರೇಮಿಯೊಂದಿಗೆ ಸೇರಿ ಹೆತ್ತವರನ್ನೇ ಕೊಂದ 17 ವರ್ಷದ ಅಪ್ರಾಪ್ತೆ

Share the Article

ಅಪ್ರಾಪ್ತರ ಮದುವೆಗೆ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ಬಾಲಕಿಯ ಪೋಷಕರನ್ನು ಪ್ರೇಮಿಗಳಿಬ್ಬರು ಸೇರಿ ಕೊಲೆ ಮಾಡಿರುವ ಭೀಕರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮದುವೆಗೆ ವಿರೋಧ ವ್ಯಕ್ತಪಡಿಸಿದ್ದ ಬಾಲಕಿಯ ಪೋಷಕರನ್ನು 17 ವರ್ಷದ ಅಪ್ರಾಪ್ತೆ ಮತ್ತು 20 ವರ್ಷದ ಯುವಕ ಕೊಲೆ ಮಾಡಿದ್ದಾರೆ. ಉತ್ತರಪ್ರದೇಶದ ಬಿಜ್ನೋರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

ಬಾಲಕಿ ಮತ್ತು ಯುವಕ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮದುವೆಗೆ ಬಾಲಕಿಯ ಪೋಷಕರು ಒಪ್ಪಿಗೆ ನೀಡಿರಲಿಲ್ಲ. ಇದರಿಂದ ಕುಪಿತಳಾದ ಮಗಳು ತಂದೆ-ತಾಯಿಯನ್ನು ಕೊಲ್ಲುವ ಪ್ಲಾನ್ ಮಾಡಿದ್ದಳು.‌ ಅಂತೆಯೇ ಇಬ್ಬರೂ ಸೇರಿ ಪೋಷಕರ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮಾ.6 ರಂದು ಬಾಲಕಿ ತಂದೆಯ ಮೃತದೇಹ ಮನೆಯಲ್ಲಿ ಪತ್ತೆಯಾಗಿತ್ತು. ಇದಕ್ಕೂ ಮುನ್ನ ಅಂದರೆ ಜ.15 ರಂದು ತಾಯಿ ಕೂಡ ಇದೇ ರೀತಿ ಮೃತಪಟ್ಟಿದ್ದರು. ಇದರಿಂದ ಅನುಮಾನಗೊಂಡ ಕುಟುಂಬದ ಸದಸ್ಯರೊಬ್ಬರು ಪೋಲಿಸರಿಗೆ ತಿಳಿಸಿದ್ದಾರೆ. ಪೊಲೀಸರು ಬಾಲಕಿ ಮತ್ತು ಆಕೆಯ ಪ್ರಿಯಕರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಬ್ಬರೂ ತಪ್ಪೊಪ್ಪಿಕೊಂಡಿದ್ದಾರೆ.

ಸದ್ಯ ಅಪ್ರಾಪ್ತೆಯನ್ನು ಬಾಲಾಪರಾಧಿ ಗೃಹಕ್ಕೆ ಸ್ಥಳಾಂತರಿಸಲಾಗಿದ್ದು, ಆರೋಪಿ ಯುವಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Leave A Reply