ಕಬಡ್ಡಿ ಪಂದ್ಯದ ವೇಳೆಯೇ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರನ ಮೇಲೆ ಗುಂಡಿನ ಮಳೆ !! | ಈ ಭಯಾನಕ ದೃಶ್ಯ ಮೊಬೈಲ್ ನಲ್ಲಿ ಸೆರೆ

ಕಬಡ್ಡಿ ಪಂದ್ಯದ ವೇಳೆಯೇ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಸಂದೀಪ್‌ ನಂಗಲ್‌‌ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಚಂಡೀಗಢದ ಜಲಂಧರ್‌ ಜಿಲ್ಲೆಯ ಮಾಲಿಯನ್‌ ಗ್ರಾಮದಲ್ಲಿ ನಡೆದಿದೆ.

 

ಮಾಲಿಯನ್‌ ಗ್ರಾಮದಲ್ಲಿ ಕಬಡ್ಡಿ ಪಂದ್ಯ ಏರ್ಪಡಿಸಲಾಗಿತ್ತು. ಪಂದ್ಯದ ನಡೆಯುತ್ತಿದ್ದ ವೇಳೆಯೇ ಅಪರಿಚಿತ ದಾಳಿಕೋರರು ಸಂದೀಪ್‌ ನಂಗಲ್‌ ತಲೆ ಹಾಗೂ ಎದೆಯ ಭಾಗಕ್ಕೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ದೂರದಿಂದ ಸರಣಿ ಬುಲೆಟ್‌ಗಳು ಹಾರುತ್ತಿರುವ ಆತಂಕಕಾರಿ ಘಟನೆಯ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಪಂದ್ಯಾವಳಿಯಲ್ಲಿದ್ದ ಪ್ರೇಕ್ಷಕರು ಸ್ಥಳದಿಂದ ಓಡಿಹೋಗುತ್ತಿರುವ ದೃಶ್ಯ ಕೂಡ ವೀಡಿಯೋದಲ್ಲಿ ಸೆರೆಯಾಗಿದೆ.

ಜಲಂಧರ್‌ ಡಿಎಸ್‌ಪಿ ಹತ್ಯೆ ವಿಚಾರವನ್ನು ದೃಢಪಡಿಸಿದ್ದು, ಕಬಡ್ಡಿ ಆಟಗಾರನ ಮೇಲೆ ಸುಮಾರು 8 ರಿಂದ 10 ಗುಂಡುಗಳನ್ನು ಹಾರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸಂದೀಪ್ ಒಂದು ದಶಕಕ್ಕೂ ಹೆಚ್ಚು ಕಾಲ ಕಬಡ್ಡಿ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ್ದಾರೆ. ಕೆನಡಾ, ಯುಎಸ್ಎ, ಯುಕೆಗಳಲ್ಲಿ ಉತ್ತಮವಾಗಿ ಆಡಿದ್ದಾರೆ. ಸಂದೀಪ್‌ ಕಬಡ್ಡಿ ಫೆಡರೇಶನ್‌ ಅನ್ನು ನಿರ್ವಹಿಸುತ್ತಿದ್ದರು.

Leave A Reply

Your email address will not be published.