ಬ್ರಹ್ಮಾವರ : ‘ ಟೀಂ ಗರುಡಾ’ ಗೋ ಕಳ್ಳತನ ಗ್ಯಾಂಗ್ ಪೊಲೀಸರ ವಶಕ್ಕೆ !

ಉಡುಪಿ : ಬ್ರಹ್ಮಾವರದಲ್ಲಿ ಇತ್ತೀಚೆಗೆ ನಡೆದ ಗೋಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆಗಾಗಿ ಶೋಧ ಕಾರ್ಯ
ನಡೆಸುತ್ತಿದ್ದ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಹಮ್ಮದ್ ಶರೀಪ್ ಯಾನೆ ಸ್ಕೊರ್ಪಿಯೊ ಶರೀಪ್(34 ) ಮುಜಾಹೀದ್ ರೆಹಮಾನ್ ಯಾನೆ ಸಲ್ಮಾನ್(22), ಅಬ್ದುಲ್ ಮಜೀದ್ ಯಾನೆ ಮಣ್ಣಿಮಟ್ಟಿ(22), ಸಯ್ಯದ್ ಅಕ್ರಮ್ ಯಾನೆ ಅಕ್ಕು ಸಯ್ಯದ್(22) ಎಂದು ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಗಸ್ತಿನ್ನಲ್ಲಿದ್ದ ಪೊಲೀಸರು ಬೆಳಿಗ್ಗಿನ ಜಾವ ಒಂದು ಬಿಳಿ ಬಣ್ಣದ ಸ್ಕೂಟಿಯು ಬ್ರಹ್ಮಾವರ ಠಾಣಾ ವ್ಯಾಪ್ತಿಯ ಬಾರ್ಕೂರು ರಸ್ತೆಯಿಂದ ಪ್ರಣವ್‌ ಆಸ್ಪತ್ರೆಗೆ ಹೋಗುವ ಒಳ ರಸ್ತೆಗೆ ಹೋಗಲು ನಿಂತಿದ್ದನ್ನು ನೋಡಿದ್ದಾರೆ. ಸ್ಕೂಟಿ ಹಾಗೂ ಒಳ ರಸ್ತೆಯಲ್ಲಿದ್ದ ಕಾರನ್ನು ಪರಿಶೀಲಿಸುವಾಗ 4 ಜನ ಆರೋಪಿಗಳು ತಲವಾರು ನೊಂದಿಗೆ ಸೀಟ್ ಇಲ್ಲದ ಕಾರಿನಲ್ಲಿದ್ದು ವಿಚಾರಿಸಿದಾಗ ದನ ಕಳ್ಳತನಕ್ಕೆ ಬಂದಿರುವುದು ಎಂಬ ವಿಷಯವನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಆರೋಪಿಗಳು ‘ಟೀಂ ಗರುಡಾ ಎಂಬ ಆಸ್ಟ್ಯಾಗ್ರಾಂ ಖಾತೆಯನ್ನು ಮಾಡಿಕೊಂಡಿದ್ದು, ಇದರ ಮೂಲಕ ಪರಸ್ಪರರ ಸಂಪರ್ಕಕ್ಕಾಗಿ ಇದನ್ನೇ ಬಳಸುತ್ತಿದ್ದುದಾಗಿ ತನಿಖೆಯಿಂದ ಕಂಡು ಬಂದಿದೆ.

ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಪೊಲೀಸರು, ಆರೋಪಿಗಳಿಂದ ಕೃತ್ಯ ನಡೆಸಲು ಉಪಯೋಗಿಸಿದ ಸ್ಕೂಟಿ, ಬಿಳಿ ಸ್ವಿಫ್ಟ್ ಕಾರು, 4 ತಲವಾರು, 2 ಹಗ್ಗಗಳು, ನೀಲಿ ಬಣ್ಣದ ಟರ್ಪಾಲ್‌ನ್ನು ವಶಪಡಿಸಿಕೊಂಡಿದ್ದಾರೆ. ಸ್ವಾಧೀನಪಡಿಸಿಕೊಂಡ ಸ್ವತ್ತುಗಳ ಅಂದಾಜು ಮೌಲ್ಯ 3,20,000 ಆಗಬಹುದು ಎಂದು ಅಂದಾಜಿಸಲಾಗಿದೆ.

Leave A Reply