ಸ್ಕ್ರಾಪ್ ಆಗಿ ಗುಜಿರಿ ಸೇರಬೇಕಿದ್ದ ಬಸ್ ನಲ್ಲಿ ಸ್ಮಾರ್ಟ್ ತರಗತಿ!! ಉಡುಪಿಯಲ್ಲೊಂದು ವಿಭಿನ್ನ ಪ್ರಯತ್ನ-ರಾಜ್ಯದಲ್ಲೇ ಸುದ್ದಿಯಾಗುವ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ

0 9

ಇಂದಿನ ಕಾಲಘಟ್ಟದಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯು ಕ್ಷೀಣಿಸುತ್ತಿರುವ ಬೆನ್ನಲ್ಲೇ ವಿದ್ಯಾರ್ಥಿಗಳನ್ನು ಮರು ಆಕರ್ಷಿಸಲು ಉಡುಪಿ ಜಿಲ್ಲೆಯಲ್ಲೊಂದು ಶಾಲೆ ಹೊಸ ಮಾದರಿಯನ್ನು ಪ್ರಯೋಗಿಸಿದ್ದು, ಸದ್ಯ ಇಡೀ ರಾಜ್ಯದಲ್ಲೇ ಹೆಚ್ಚು ಸುದ್ದಿಯಾಗಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶತಮಾನದ ಹೊಸ್ತಿಲಲ್ಲಿ ಇರುವ ಬಗ್ವಾಡಿಯ ಸರ್ಕಾರಿ ಶಾಲೆಯೊಂದರಲ್ಲಿ ಸ್ಕ್ರಾಪ್ ಆಗಿ ಗುಜರಿ ಸೇರಲಿದ್ದ ಸರ್ಕಾರಿ ಬಸ್ ನ್ನು ಸ್ಮಾರ್ಟ್ ಕ್ಲಾಸ್ ಗೆಂದೇ ತಯಾರಿಸಿ ಗ್ರಾಮೀಣ ಭಾಗದ ಸಹೋದರರಿಬ್ಬರ ಹೊಸ ಪ್ರಯತ್ನ ಫಲ ನೀಡಿದ್ದು, ಸದ್ಯ ಸಾಮಾಜಿಕ ಜಾಲತಾಣಗಳ ಸಹಿತ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ.ಕಲಾವಿದರಾದ ಪ್ರಕಾಶ್ ಆಚಾರ್ಯ ಹಾಗೂ ಪ್ರಶಾಂತ್ ಆಚಾರ್ಯ ಅವರ ಕೈಚಳಕದಿಂದ ಮೂಡಿದ ಸ್ಮಾರ್ಟ್ ಕ್ಲಾಸ್ ವಿದ್ಯಾರ್ಥಿಗಳನ್ನು ಖುಷಿಯ ಕಡಲಲ್ಲಿ ತೇಲಿಸಿದೆ.

ಬಸ್ಸಿನೊಳಗೆ ಸ್ಮಾರ್ಟ್ ಕ್ಲಾಸ್ ಗೆ ಒಟ್ಟು 25 ವಿದ್ಯಾರ್ಥಿಗಳು ಕೂರಲು ಅವಕಾಶವಿದ್ದು, ತರಗತಿಯ ರೀತಿಯಲ್ಲಿ ರೂಪುಗೊಂಡಿರುವ ಬಸ್ ನ ಒಳಗಡೆ ಸಾಹಿತಿಗಳು, ಕವಿಗಳು, ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳು ರಾರಾಜಿಸುತ್ತಿದ್ದು, ಗುಜರಿ ಸೇರಬೇಕಿದ್ದ ಸ್ಕ್ರಾಪ್ ಬಸ್ ನಿಂದ ಪ್ರಯೋಜನ ಪಡೆಯುವುದು ಈ ಮಟ್ಟಕ್ಕೆ ಇದೆಯೆಂಬುದನ್ನು ತೋರಿಸಿಕೊಟ್ಟ ಕಲಾವಿದರಿಗೊಂದು ಹ್ಯಾಟ್ಸಪ್ ಎನ್ನುತ್ತಿದೆ ಶಾಲಾ ಆಡಳಿತ ಮಂಡಳಿ, ಪೋಷಕರು ಹಾಗೂ ವಿದ್ಯಾರ್ಥಿ ಸಮೂಹ.

Leave A Reply