ಹಿಂದೂ ಪತ್ನಿಯನ್ನು ನಡುರಸ್ತೆಯಲ್ಲಿ ಮುಸ್ಲಿಂ ಪತಿ ಮಚ್ಚು ಬೀಸಿದ ಪ್ರಕರಣ| ‘ಇಜಾಜ್ ಜೈಲಿಂದ ಹೊರಬಂದರೆ ಕೊಚ್ಚಿ ಹಾಕ್ತೇವೆ’| ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಹೇಳಿಕೆ

ಗದಗದಲ್ಲಿ ನಡೆದ ಗೃಹಿಣಿ ಕೊಲೆ ಯತ್ನ ಪ್ರಕರಣ ದಿನ ಕಳೆದಂತೆ ರಾಜಕೀಯ ಸ್ವರೂಪ ಪಡೆಯಲಾರಂಭಿಸಿದೆ. ಪ್ರೀತಿ ಮಾಡಿ, ಮದುವೆಯಾಗಿ ಈ ಹಿಂಸೆ ಕೊಟ್ಟಿರೋ ಹಿಂದೆ ಷಡ್ಯಂತ್ರವಿದೆ ಎಂದು ಆರೋಪಿಸಿರುವ ಪ್ರಮೋದ್ ಮುತಾಲಿಕ್ ಆರೋಪಿ ಒಂದು ವೇಳೆ ಆರೋಪಿ ಇಜಾಜ್ ಜೈಲಿನಿಂದ ಹೊರಬಂದರೆ ನಾವೇ ಕೊಚ್ಚಿ ಹಾಕ್ತೇವೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

 

ಗದಗನಲ್ಲಿ ಗೃಹಿಣಿ ಮೇಲೆ ಕೊಲೆ ಯತ್ನ ಪ್ರಕರಣದ ಹಿನ್ನೆಲೆಯಲ್ಲಿ ಅಪೂರ್ವ ಚಿಕಿತ್ಸೆ ಪಡೆಯುತ್ತಿರುವ ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಗೆ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಭೇಟಿ ನೀಡಿದರು.

ತೀವ್ರವಾಗಿ ಗಾಯಗೊಂಡ ಅಪೂರ್ವ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಿಮ್ಸ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಪ್ರಮೋದ್ ಮುತಾಲಿಕ್ ಅಪೂರ್ವಳ ಆರೋಗ್ಯ ವಿಚಾರಿಸಿದರು. ಅಪೂರ್ವ ತಾಯಿಯೊಂದಿಗೆ ಮುತಾಲಿಕ್ ಚರ್ಚಿಸಿದರು. ಈ ವೇಳೆ ಘಟನೆ ಬಗ್ಗೆ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು‌

Leave A Reply

Your email address will not be published.