ತಾಯಿಗೆಂದು ಔಷಧಿ ತರಲು ಹೋದಾಗ ರಷ್ಯಾ ದಾಳಿಗೆ ಬಲಿಯಾದ ಮಗಳು !
ತನ್ನ ಅನಾರೋಗ್ಯ ಪೀಡಿತ ತಾಯಿಗೆ ಔಷಧ ತರಲು ಹೊರ ಹೋಗಿದ್ದ ಯೂಕ್ರೇನಿಯನ್ ಮಹಿಳೆಗೆ ರಷ್ಯಾ ಯೋಧರು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆಯೊಂದು ಯೂಕ್ರೇನ್ ರಾಜಧಾನಿ ಕೀಯೆವ್ ಹೊರವಲಯದ ಗ್ರಾಮವೊಂದರಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ವಲೇರಿಯಾ ಮಕ್ಸೆಟ್ನಾ (31) ಗ್ರೂಪ್ ಎಂದು ಗುರುತಿಸಲಾಗಿದೆ.
ವಲೇರಿಯಾ ತಾಯಿ ಇರಿನಾ ಮತ್ತು ಕಾರು ಚಾಲಕನ ಕೂಡ ರಷ್ಯಾ ಯೋಧರ ದಾಳಿಗೆ ಮೃತಪಟ್ಟಿದ್ದಾರೆ.
ವಲೇರಿಯಾ ಅವರು ವೈದ್ಯರಾಗಿದ್ದು ಸ್ಥಳೀಯರಿಗೆ ಸಹಾಯ ಮಾಡುವ ಸಲುವಾಗಿ ರಷ್ಯಾ ಆಕ್ರಮಣ ಮಾಡಿದ ನಂತರವೂ ಯೂಕ್ರೇನ್‌ನಲ್ಲಿ ಇರಲು ನಿರ್ಧಾರ ಮಾಡಿದ್ದರು. ತನ್ನ ತಾಯಿಯ ಔಷಧಿ ಖಾಲಿಯಾದ ಬಳಿಕ ದೇಶದಿಂದ ಹೊರ ಹೋಗಬೇಕು ಎಂಬುದಾಗಿ ವಲೇರಿಯಾ ನಿರ್ಧಾರ ಮಾಡಿದ್ದರು ಎನ್ನಲಾಗಿದೆ. ಯೂಕ್ರೇನ್‌ನ ಪಶ್ಚಿಮ ಗಡಿಯ ಕಡೆಗೆ ತೆರಳುವಾಗ ರಷ್ಯಾ ಟ್ಯಾಂಕ್ ದಾಳಿ ಮಾಡಿದೆ.