ಉಪ್ಪಿನಂಗಡಿ : ಅಪ್ರಾಪ್ತೆಗೆ ಚುಡಾವಣೆ ,ಆರೋಪಿಯ ಬಂಧನ

ಪುತ್ತೂರು: ಉಪ್ಪಿನಂಗಡಿ ಶಾಲೆಯೊಂದರ ಅಪ್ರಾಪ್ತ ಬಾಲಕಿಗೆ ಚುಡಾವಣೆ ಮಾಡಿದ ಆರೋಪದಡಿಯಲ್ಲಿ ಪುತ್ತೂರಿನ ಗಾರ್ಬಲ್‌ವೊಂದರಲ್ಲಿ ಕೆಲಸಕ್ಕಿರುವ ಅಸ್ಸಾಂ ಮೂಲದ ಆರೋಪಿಯನ್ನು ಪುತ್ತೂರು ಮಹಿಳಾ ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ಮೂಲದವರಾಗಿದ್ದು, ಪುತ್ತೂರು ಮುಕ್ರಂಪಾಡಿಯಲ್ಲಿ ಅಡಿಕೆ ಗಾರ್ಬಲ್‌ವೊಂದರಲ್ಲಿ ಕೆಲಸಕ್ಕಿರುವ ಟೋನಿ ನಾಯಕ್ ಎಂಬವರು ಬಂಧಿತ ಆರೋಪಿ.

ಆರೋಪಿ ಟೋನಿ ನಾಯಕ್ ಈ ಹಿಂದೆ ಮಠಂತಬೆಟ್ಟು ಸಮೀಪ ಗಾರ್ಬಲ್ ಕೆಲಸಕ್ಕಿದ್ದ ವೇಳೆ ಉಪ್ಪಿನಂಗಡಿ ಶಾಲೆಯ ಬಾಲಕಿಗೆ ಚುಡಾಯಿಸಿದ್ದ.

ಈ ಕುರಿತು ಮಾಹಿತಿ ಅರಿತ ಸಂಸ್ಥೆಯ ಮಾಲಕರು ಆತನನ್ನು ಕೆಲಸದಿಂದ ಬಿಟ್ಟಿದ್ದರು. ಬಳಿಕ ಆತ ಇನ್ನೊಂದು ಗಾರ್ಬಲ್ ಕೆಲಸಕ್ಕೆ ಸೇರಿಕೊಂಡಾಗ ಅಲ್ಲಿಯೂ ಆತ ಬಾಲಕಿಗೆ ಕಿರುಕುಳ ಕೊಡುತ್ತಿರುವುದು ಕಂಡು ಬಂದು ಅಲ್ಲಿಯೂ ಆತನನ್ನು ಕೆಲಸದಿಂದ ಬಿಡಿಸಲಾಗುತ್ತದೆ. ಕೊನೆಗೆ ಆತ ಮುಕ್ರಂಪಾಡಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿದ ಬಳಿಕ ಸಂಸ್ಥೆಗೆ ರಜೆ ಮಾಡಿ ಉಪ್ಪಿನಂಗಡಿಗೆ ತೆರಳಿದ್ದು, ಅಲ್ಲಿ ಬಸ್‌ನಲ್ಲಿ ಶಾಲಾ ಬಾಲಕಿಗೆ ಕಿರುಕುಳ ನೀಡಿರುವುದನ್ನು ಬಾಲಕಿ ಪೋಷಕರಿಗೆ ತಿಳಿಸಿ ಬಳಿಕ ಬಾಲಕಿ ಮಹಿಳಾ ಪೊಲೀಸ್ ಠಾಣೆಗೆ ಆರೋಪಿ ವಿರುದ್ಧ ದೂರು ನೀಡಿದಂತೆ ಆರೋಪಿಯ ಟೋನಿ ನಾಯಕ್ ಅವರ ವಿರುದ್ಧ ಪೋಕೋ ಪ್ರಕರಣ ದಾಖಲಿಸಿ, ಮಾ.12ರಂದು ಮಹಿಳಾ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave A Reply